ಬೆಂಗಳೂರು:– PM ಮೋದಿ ಅವರನ್ನು ನರಹಂತಕ ಅಂದಿದ್ದು ಸರಿಯೇ!? ಎಂದು ಸಿಎಂ ಸಿದ್ದು ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ಮಾತೆತ್ತಿದ್ರೆ ಸಂವಿಧಾನ ಅಂತಾರೆ. ಕರ್ನಾಟಕದಲ್ಲಿ ಪತ್ರಿಕಾ, ವಾಕ್ ಸ್ವಾತಂತ್ರ್ಯ ಹರಣ ಆಗ್ತಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ, ಟಿಪ್ಪಣಿ ಮಾಡಿದ್ರೆ ಸರ್ಕಾರವೇ ಭಯೋತ್ಪಾದನೆ ರೀತಿಯಲ್ಲಿ ಕೇಸ್ ದಾಖಲು ಮಾಡ್ತಿದೆ.
ಪ್ರತಾಪ್ ಸಿಂಹ, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಕೇಸ್ ಹಾಕಿದೆ. ಜಾಮೀನು ರಹಿತ ಕೇಸ್ ಹಾಕುವ ವರೆಗೂ ಬಂದಿದೆ. ಸಿದ್ದರಾಮಯ್ಯ ದೇಶದ ಪ್ರಧಾನಿ ಬಗ್ಗೆ ಲಘುವಾಗಿ ಮಾತಾಡಿದ್ದು, ನರ ಹಂತಕ ಅಂದಿದ್ದು ಏನೂ ಅನಿಸೋದಿಲ್ಲ. ಜಮೀರ್ ಅವರಂತ ಹೇಳಿಕೆ ತಪ್ಪು ಅನಿಸಲ್ಲ.
ಸಿದ್ದರಾಮಯ್ಯ ಸರ್ಕಾರ ತುರ್ತುಪರಿಸ್ಥಿತಿ ಹೇರುವ ರೀತಿ ವರ್ತಿಸುತ್ತಿದೆ. ಇದು ಅತ್ಯಂತ ಹೇಯ ಕೃತ್ಯ ಅಂತ ಬಾವಿಸ್ತೇನೆ ಎಂದು ಹೇಳಿದ್ದಾರೆ.