ಸಾಕಷ್ಟು ಮಂದಿ ಕಾಲಿನ ನೋವು, ಪಾದದಲ್ಲಿ ಉರಿಯನ್ನು ಅನುಭವಿಸುತ್ತಾರೆ, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿರಬೇಕು ಸರಿ ಹೋಗುತ್ತೆ ಎಂದು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ಆ ಉರಿ ಅಥವಾ ಸುಡುವ ಅನುಭವವು ಬೇರೆಯದ್ದನ್ನೇ ಹೇಳುತ್ತೆ, ನಿಮಗೆ ಮಧುಮೇಹ ಬರುವ ಸಾಧ್ಯತೆ ಇರಬಹುದು, ಹೈಪೊಥೈರಾಯ್ಡಿಸಮ್, ವಿಟಮಿನ್ ಕೊರತೆಯೂ ಆಗಿರಬಹುದು.
ಪಾದಗಳಉರಿಗೆ ಸರಳ ಮನೆ ಮದ್ದುಗಳು
- ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರದ ಸಮಸ್ಯೆಯು ನಿವಾರಣೆಯಾಗಿ ಉರಿಯ ಅನುಭವವು ಕಡಿಮೆಯಾಗುತ್ತದೆ.
- ದೇಹಕ್ಕೆ ತಂಪಾಗಿರುವ ಈ ಮದರಂಗಿಯನ್ನು ಉಷ್ಣದಿಂದ ಪಾದದಲ್ಲಿ ಉರಿ ಉಂಟಾಗುತ್ತಿದ್ದರೆ, ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಪಾದವನ್ನು ತೊಳೆಯುವುದರಿಂದ ತಂಪಿನ ಅನುಭವವಾಗುತ್ತದೆ.
- ಒಂದು ಚಮಚ ಸೋಂಪು ಕಾಳು ಹಾಗೂ ಒಂದು ಚಮಚ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
- ಅರಿಶಿನ ನೀರಿನಲ್ಲಿ ಪಾದವನ್ನು ಸ್ವಲ್ಪ ಹೊತ್ತು ಇಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
- ಒಂದು ಗ್ಲಾಸ್ ನೀರಿಗೆ ವಿನೆಗರ್ ಒಂದು ಚಮಚ ಬೆರೆಸಿ ಕುಡಿಯುವುದರಿಂದ ಪಾದದ ಉರಿಯು ಕಡಿಮೆಯಾಗುತ್ತದೆ.
- ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಕಪ್ ಕಲ್ಲು ಉಪ್ಪನ್ನು ಬೆರೆಸಿ, ಹತ್ತು ಹದಿನೈದು ನಿಮಿಷಗಳ ಕಾಲ ಪಾದವನ್ನಿಟ್ಟರೆ ಉರಿ ಅನುಭವವು ಕಡಿಮೆಯಾಗುತ್ತದೆ.
- ಸಾಸಿವೆ ಎಣ್ಣೆಯಿಂದ ಪಾದವನ್ನು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು, ಸ್ವಲ್ಪ ಸಮಯದ ನಂತರದಲ್ಲಿ ಐಸ್ ತುಂಡುಗಳಿಂದ ಮಸಾಜ್ ಮಾಡುವುದರಿಂದ ಪರಿಣಾಮಕಾರಿಯಾಗಿದೆ.
- ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಪಾದಕ್ಕೆ ಹಚ್ಚುವುದರಿಂದಲೂ ಈ ಪಾದದ ಉರಿಯಿಂದ ಪರಿಹಾರ ಕಂಡುಕೊಳ್ಳಬಹುದು.
- ಸೋರೆ ಕಾಯಿಯ ತಿರುಳನ್ನು ಪಾದದ ಅಡಿಗೆ ಉಜ್ಜಿಕೊಳ್ಳುವುದರಿಂದಲೂ ಪಾದದ ಉರಿಯು ನಿವಾರಣೆಯಾಗುತ್ತದೆ.
- ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.