ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ಬಡವರಿಗೆ, ಸಂತ್ರಸ್ತರಿಗೆ, ಅಗತ್ಯವಿರುವವರಿಗೆ ನಮ್ಮ ಕೈಲಾದ ವಸ್ತುಗಳನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿಯೇ ಹೇಳಲಾಗಿದೆ. ಅನ್ನದಾನ, ರಕ್ತದಾನ, ಅಂಗದಾನ ಮಾತ್ರವಲ್ಲ ಹಣ, ಬಟ್ಟೆ ಹೀಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ವಸ್ತುಗಳನ್ನು ದಾನ ಮಾಡಬೇಕು
ನ್ಯೂ ಇಯರ್ ಸಂಭ್ರಮದಲ್ಲಿದ್ದವರ ಮೇಲೆ ಭಯೋತ್ಪಾದಕ ದಾಳಿ: ಅಮೇರಿಕಾ ನಿವೃತ್ತ ಯೋಧನ ಮೇಲೆ ಶಂಕೆ
ಕೆಲವರು ತಮ್ಮ ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಸಹ ಬಳಸುತ್ತಾರೆ. ಇನ್ನೂ ಕೆಲವೆಡೆ ಹಳೆ ಸೀರೆ ಅಥವಾ ಬಟ್ಟೆ ಇರುವ ಪಾತ್ರೆ, ಬಕೆಟ್ ಖರೀದಿಸುವ ಟ್ರೆಂಡ್ ಇದೆ. ಆದರೆ ಹಳೆಯ ಬಟ್ಟೆಗಳನ್ನು ಬಿಸಾಡುವ ಈ ಅಭ್ಯಾಸ ಒಳ್ಳೆಯದೇ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ನೀವು ನಿಮ್ಮ ಬಟ್ಟೆಗಳನ್ನು ಎಸೆಯುವ, ಮಾರಾಟ ಮಾಡುವ ಅಥವಾ ಬೇರೆಯವರಿಗೆ ಕೊಡುವ ಅಭ್ಯಾಸ ಬಿಟ್ಟುಬಿಡಬೇಕು. ಆದರೂ ಕೂಡ ನಿಮಗೆ ಹಳೆ ಬಟ್ಟೆಗಳನ್ನು ಮನೆಯಲ್ಲಿ ಇಡಲು ಜಾಗವಿಲ್ಲ ಅಥವಾ ತೊಂದರೆಯಾಗುತ್ತಿದ್ದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಹಳೆಯ ಬಟ್ಟೆಗಳನ್ನು ಕೊಡಲು ನೀವು ಯೋಚಿಸುತ್ತಿದ್ದರೆ ಅದನ್ನು ಮೊದಲು ಉಪ್ಪು ನೀರಿನಲ್ಲಿ ಚೆನ್ನಾಗಿ ನೆನೆಸಿಡಿ. ಮೂರು ಬಾರಿ ಬಟ್ಟೆಯನ್ನು ಸ್ವಚ್ಛಗೊಳಿಸಿ ನೀವು ದಾನ ಮಾಡಿದ್ರೆ ಬಹಳ ಒಳ್ಳೆಯದು. ನಿಮ್ಮ ಪ್ರಭೆ, ಶಕ್ತಿ ಬಟ್ಟೆಯಲ್ಲಿ ಇರದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ.
ಇದಲ್ಲದೇ ಬಟ್ಟೆಗಳನ್ನು ಕೊಡುವಾಗ ಉಚಿತವಾಗಿ ನೀಡಬೇಡಿ. ಬಟ್ಟೆ ಕೊಟ್ಟ ನಂತರ ಅವರಿಂದ ಕನಿಷ್ಠ 1 ರೂಪಾಯಿ ತೆಗೆದುಕೊಳ್ಳಿ. ಇದಲ್ಲದೇ ಬಟ್ಟೆ ಯಾರೂ ತೆಗೆದುಕೊಳ್ಳದಿದ್ದರೆ, ಅದನ್ನು ಕಸದ ತೊಟ್ಟಿಗೆ ಎಸೆಯಬೇಡಿ, ಬದಲಾಗಿ ನೀರಿಗೆ ಬಿಡಿ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.
ಇನ್ನೂ ಕೆಲವರಿಗೆ ಹಳೆಯ ಬಟ್ಟೆಗಳನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಅಭ್ಯಾಸವಿದೆ. ಅಡುಗೆ ಕೋಣೆಯಲ್ಲಿ ಅಥವಾ ನೆಲ ಒರೆಸಲು ಕೆಲವರು ಹಳೆಯ ಬಟ್ಟೆಯನ್ನು ಬಳಸುತ್ತಾರೆ. ಆದರೆ ಇಂತಹ ಅಭ್ಯಾಸ ಮನೆಗೆ ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.