ಬಿಸಿನೀರು ಕುಡಿಯುವುದರಿಂದ ಆರೋಗ್ಯಕಾರಿ ಪ್ರಯೋಜನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಕೊರೊನಾ ಕಾಲದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿದ ಅನೇಕರು ಬಿಸಿನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರು.
ಬಿಸಿನೀರು ನಮ್ಮ ದೇಹದಲ್ಲಿರುವ ನರಮಂಡಲವನ್ನೂ ಸಡಿಲಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ಇಂತಹವರು ಮಲಗುವ ಮುನ್ನ ಬಿಸಿ ನೀರು ಕುಡಿದರೆ ಒತ್ತಡ ಕಡಿಮೆಯಾಗಿ ಶಾಂತದಿಂದ ಮಲಗಬಹುದು..
ಮಹಿಳೆಯರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಇರುತ್ತದೆ. ಆ ಅವಧಿಯಲ್ಲಿ ವಿಪರೀತ ನೋವು ಇರುತ್ತದೆ. ಇಂತಹ ಸಮಯದಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ನೋವು ಕಡಿಮೆಯಾಗುತ್ತದೆ. ಶಾಂತಿಯುತವಾಗಿ ಮಲಗಬಹುದು. ಅಷ್ಟೇ ಅಲ್ಲ ಬಿಸಿ ನೀರು ನೋಯುತ್ತಿರುವ ಗಂಟಲು ಸಮಸ್ಯೆಗಳನ್ನೂ ಸಹ ಕಡಿಮೆ ಮಾಡುತ್ತದೆ.
ಅಷ್ಟೇ ಏಕೆ.. ಮಲಗುವ ಮುನ್ನ ಬಿಸಿ ನೀರು ಕುಡಿದರೆ.. ನಿಮ್ಮ ಹಲ್ಲಿನಲ್ಲಿ ಅಂಟಿಕೊಂಡಿರುವ ಸೂಕ್ಷ್ಮಾಣುಗಳನ್ನು ಹೋಗಲಾಡಿಸುತ್ತದೆ. ಹಲ್ಲುಗಳನ್ನು ಸ್ವಚ್ಛವಾಗಿಡುತ್ತದೆ. ಬಿಸಿನೀರು ಕುಡಿಯುವುದರಿಂದ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಹಾಗಿದ್ರೆ ತಡ ಏಕೆ ಇಂದಿನಿಂದಲೇ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿಯಲು ಮರೆಯಬೇಡಿ