ಮನುಷ್ಯನಿಗೆ ಮೂರು ಹೊತ್ತಿನ ಆಹಾರ ಸೇವನೆ ಎಷ್ಟು ಪ್ರಾಮುಖ್ಯತೆಯೋ, ಅದೇ ರೀತಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಿ, ಅದರಲ್ಲಿ ಅಳಿದುಳಿದಿರುವಂತಹ ಕಲ್ಮಶವು ಕೂಡ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯುವುದು ಅಷ್ಟೇ ಮುಖ್ಯ.
2028 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನಾನೇ ಅಭ್ಯರ್ಥಿ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ!
ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬರುವುದರಿಂದ, ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ.
ಕೆಲವು ಜನರ ಮಲ ಟಾಯ್ಲೆಟ್ ಸೀಟ್ ಗೆ ಪ್ರತಿ ಬಾರಿ ಮಲವಿಸರ್ಜನೆ ಮಾಡಿದಾಗಲೂ ಅಂಟಿಕೊಳ್ಳುತ್ತದೆ. ಅದನ್ನು ಹೋಗಲಾಡಿಸಲು ಹಲವು ಬಾರಿ ಫ್ಲಶ್ ಮಾಡಬೇಕಾಗುತ್ತದೆ.
ಇದನ್ನು ತಜ್ಞ ವೈದ್ಯರು ಅನ್ವೇಶಿಸಿ ಅತಿಯಾದ ಕೊಬ್ಬಿನ ಅಂಶ ದೇಹಕ್ಕೆ ಆಹಾರ ಪದಾರ್ಥಗಳ ಮೂಲಕ ಹೋಗುತ್ತಿದೆ, ಆದರೆ ಹೊಟ್ಟೆ ಅದನ್ನು ಜೀರ್ಣ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಕೊಬ್ಬಿನ ಅಂಶ ಲಿವರ್ ನಲ್ಲಿ ಶೇಖರಣೆ ಆಗುತ್ತಿದೆ ಎಂದು ಹೇಳುತ್ತಾರೆ.
ಫ್ಯಾಟಿ ಲಿವರ್ ಕಾಯಿಲೆಯ ಲಕ್ಷಣ ಇದಾಗಿದ್ದು, ವೈದ್ಯರು ಇದನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ. ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಯಾವುದೇ ಔಷಧಿಯನ್ನು ತೆಗೆದುಕೊಳ್ಳದೆ ಲಿವರ್ ಅನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು. ಫ್ಯಾಟಿ ಲಿವರ್ ಕಾಯಿಲೆಯ ಮತ್ತಷ್ಟು ಲಕ್ಷಣಗಳನ್ನು ಮತ್ತು ಇದಕ್ಕೆ ಮನೆ ಮದ್ದುಗಳನ್ನು ತಿಳಿಯೋಣ ಬನ್ನಿ.
ಮಲ ಅಂಟಿಕೊಳ್ಳುತ್ತಿದ್ದರೆ, ನಿರ್ಲಕ್ಷ್ಯ ಬೇಡ: ಒಂದು ವೇಳೆ ನಿಮ್ಮ ಟಾಯ್ಲೆಟ್ ಸೀಟ್ ಕವರ್ ಗೆ ಮಲ ಅಂಟಿಕೊಳ್ಳುತ್ತಿದ್ದರೆ, ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದು ಫ್ಯಾಟಿ ಲಿವರ್ ಕಾಯಿಲೆಯ ಲಕ್ಷಣವಾಗಿ ರುತ್ತದೆ. ಒಂದು ವೇಳೆ ದೀರ್ಘಕಾಲದಿಂದ ನೀವು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ವೈದ್ಯರಿಂದ ಮೊದಲು ಲಿವರ್ ಪರೀಕ್ಷೆ ಮಾಡಿಸಿ ಕೊಳ್ಳಿ. ದೇಹದಲ್ಲಿ ಹೆಚ್ಚು ಕೊಬ್ಬಿನ ಅಂಶ ಇದ್ದಾಗ ಈ ರೀತಿ ಆಗುತ್ತದೆ, ನೆನಪಿರಲಿ.
ಲಿವರ್ ನಲ್ಲಿರುವ ಕೊಬ್ಬಿನ ಪ್ರಮಾಣವನ್ನು ಹಲವು ಬಗೆಯ ಆಹಾರಗಳು ಕಡಿಮೆ ಮಾಡುವ ಗುಣವನ್ನು ಹೊಂದಿವೆ. ವೈದ್ಯರು ಹೇಳುವ ಹಾಗೆ, ವಿಟಮಿನ್ ಇ ಇರುವಂತಹ ಆಹಾರಗಳನ್ನು ಈ ಸಂದರ್ಭದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಸೂರ್ಯಕಾಂತಿ ಬೀಜಗಳು, ಬಾದಾಮಿ ಬೀಜಗಳು, ಕಡಲೆ ಬೀಜಗಳು, ಕುಂಬಳಕಾಯಿ ಬೀಜಗಳು, ಕೆಂಪು ಬಣ್ಣದ ಕ್ಯಾಪ್ಸಿಕಂ, ಬ್ಲಾಕ್ ಕಾಫಿ ಇವುಗಳು ಫ್ಯಾಟಿ ಲಿವರ್ ಸಮಸ್ಯೆಯನ್ನು ದೂರ ಮಾಡುವ ಸಾಧ್ಯತೆ ಇದೆ.
ವ್ಯಾಯಾಮ ಮಾಡುವುದು ದೇಹದ ಪ್ರತಿಯೊಂದು ಅಂಗಾಂಗಕ್ಕೆ ಬಹಳ ಒಳ್ಳೆಯದು. ಕೊಬ್ಬಿನ ಅಂಶವನ್ನು ಇದು ಸಾಕಷ್ಟು ಕಡಿಮೆ ಮಾಡುತ್ತಾ ದೇಹಕ್ಕೆ ಶಕ್ತಿಯನ್ನು ಕೊಡುತ್ತಾ ಬರುತ್ತದೆ. ಇದಕ್ಕಾಗಿ ರನ್ನಿಂಗ್, ಜಾಗಿಂಗ್, ಜಂಪಿಂಗ್, ಬರ್ಪೀಸ್, ಡೆಡ್ ಲಿಫ್ಟ್, ಬಲವರ್ಧನೆ ವ್ಯಾಯಾಮಗಳು, ಯೋಗ ಇತ್ಯಾದಿಗಳನ್ನು ಮಾಡಬಹುದು. ಇದರ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕಡೆ ಆಲೋಚಿಸಿ. ಏಕೆಂದರೆ ಇದು ಕೂಡ ಕಾಯಿಲೆಯನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.
ಫ್ಯಾಟಿ ಲಿವರ್ ಕಾಯಿಲೆ ಬರಲು ಪ್ರಮುಖ ಕಾರಣ ಇದು. ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಕೆಲವು ಜನರು ಮಾನಸಿಕವಾಗಿ ಸದೃಢವಾಗಿರುತ್ತಾರೆ. ಇನ್ನು ಕೆಲವರು ಬೇರೆ ಬೇರೆ ವಿಧಾನಗಳ ಮೂಲಕ ತಮ್ಮ ಆಹಾರ ಪದ್ಧತಿಯನ್ನು ನಿರ್ವಹಿಸಿಕೊಳ್ಳುತ್ತಾರೆ. ವಾರದಲ್ಲಿ ಕೇವಲ ಒಂದು ಬಾರಿ ಸ್ವಲ್ಪ ಪ್ರಮಾಣದಲ್ಲಿ ಜಂಕ್ ಫುಡ್ ಸೇವಿಸಿ ವ್ಯಾಯಾಮ ಮಾಡಿದರೆ ಈ ಕಾಯಿಲೆಯಿಂದ ಸುಲಭವಾಗಿ ಹೊರ ಬರಬಹುದು