ನಿಮ್ಮ ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛವಾಗಿ ಮತ್ತು ಧೂಳು ಮುಕ್ತವಾಗಿರಿಸಿಕೊಳ್ಳುವುದು ಮುಖ್ಯ. ಇದು ನಿಮ್ಮ ಮನೆಯ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಸುರಕ್ಷಿತ ಕೂಡ. ಅಲುಗಾಡುವ ಸೀಲಿಂಗ್ ಫ್ಯಾನ್ನ ಮುಖ್ಯ ಸಮಸ್ಯೆ ಧೂಳು. ಎತ್ತರದ ಸೀಲಿಂಗ್ನಲ್ಲಿ ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟಕರವೇ, ಆದರೆ ಅದನ್ನೂ ಸ್ವಚ್ಚ ಮಾಡಲು ಸುಲಭ ಮಾರ್ಗಗಳಿವೆ.
JDS ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ಆಗುತ್ತಿದೆ: ಸಚಿವ ಕೆ.ವೆಂಕಟೇಶ್
ಹಬ್ಬದ ವೇಳೆ ಮನೆಯ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡೋದು ಸ್ವಲ್ಪ ರಿಸ್ಕಿ ವಿಚಾರ. ಹೀಗಾಗಿ ಕೆಲವರು ಅದು ಕಷ್ಟನಪ್ಪಾ ಅಂತಾ ಫ್ಯಾನ್ ಮೇಲೆ ಧೂಳು ಹೊಡೆದುಕೊಂಡು ಸುಮ್ನಾಗಿರ್ತಾರೆ. ಆದ್ರೆ ಮನೆ ಸ್ವಚ್ಛವಾಗಿ ಕಾಣೋದು ಮನೆಯ ಎಲ್ಲಾ ಭಾಗ ಸ್ವಚ್ಛವಾಗಿದ್ರೆ ಮಾತ್ರವೇ, ಆ ಫ್ಯಾನ್ ಒಂದು ಗಲೀಜಾಗಿ ಕಂಡ್ರೆ ಏನ್ ಚೆಂದ ಹೇಳಿ.
ಈಸಿಯಾಗಿ ಮತ್ತೆ ಫಳಫಳ ಹೊಳೆಯುವಂತೆ ಫ್ಯಾನ್ ಕ್ಲೀನ್ ಮಾಡಲು ಒಂದಿಷ್ಟು ಟಿಪ್ಸ್ಗಳನ್ನು ನಿಮಗಾಗಿ ಹೇಳ್ತೀವಿ ಕೇಳಿ.
ಉದ್ದನೆಯ ಸಾಫ್ಟ್ ಡಸ್ಟರ್
ಸೀಲಿಂಗ್ ಫ್ಯಾನ್ ಅನ್ನು ಸ್ವಚ್ಛಗೊಳಿಸಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ.
ಉದ್ದನೆಯ ಸಾಫ್ಟ್ ಡಸ್ಟರ್ನಲ್ಲಿ ಫ್ಯಾನ್ ಕ್ಲೀನ್ ಮಾಡೋ ಮುನ್ನ, ಫ್ಯಾನ್ ಕೆಳಗೆ ಬೀಳುವ ಧೂಳನ್ನು ಹಿಡಿಯಲು ಹಳೆಯ ಬೆಡ್ ಶೀಟ್ ಅನ್ನು ಇಡಿ. ನಂತರ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ
ನಂತರ ಈ ಹ್ಯಾಂಡ್ ಡಸ್ಟರ್ ಬಳಸಿಕೊಂಡು ಫ್ಯಾನ್ನ ಮೇಲಾವರಣ, ಡೌನ್ ರಾಡ್ ಮತ್ತು ಮೋಟಾರ್ ಹೌಸಿಂಗ್ ಅನ್ನು ಕ್ಲೀನ್ ಮಾಡಿ.
ಡಸ್ಟರ್ ಅನ್ನು ನಿಧಾನವಾಗಿ ಒಂದು ತುದಿಯಿಂದ ಇನ್ನೊಂದು ತುದಿಗೆ ಚಲಿಸುವ ಮೂಲಕ ಪ್ರತಿ ಫ್ಯಾನ್ ಬ್ಲೇಡ್ ಮೇಲ್ಭಾಗವನ್ನು ಕ್ಲೀನ್ ಮಾಡಿ. ಇದನ್ನು ಫ್ಯಾನ್ ರೆಕ್ಕೆಯ ಕೆಳಭಾಗಕ್ಕೂ ಪುನರಾವರ್ತಿಸಿ.
ನೀವು ಫ್ಲಾಟ್ ಡಸ್ಟಿಂಗ್ ಸೌಕರ್ಯ ಹೊಂದಿರುವ ವ್ಯಾಕ್ಯೂಮ್ ಕ್ಲೀನರ್ ಹೊಂದಿದ್ದರೆ, ಫ್ಯಾನ್ ಸ್ವಚ್ಛಗೊಳಿಸೋದು ಕಷ್ಟದ ಮಾತೇ ಅಲ್ಲ. ಈ ವಿಧಾನದ ಮೂಲಕ ಫ್ಯಾನ್ ಧೂಳು ಮನೆ ಪೂರ್ತಿ ಹರಡದಂತೆ ನೋಡಿಕೊಳ್ಳಬಹುದು.
ಫ್ಲಾಟ್ ಡಸ್ಟಿಂಗ್ ಮೂಲಕ ನಿಧಾನವಾಗಿ ಮತ್ತು ಸರಾಗವಾಗಿ ಪ್ರತಿ ಫ್ಯಾನ್ ಬ್ಲೇಡ್ನ ಮೇಲೆ ಚಲಾಯಿಸಿ. ಈ ವ್ಯಾಕ್ಯೂಮ್ ಕ್ಲೀನರ್ ನಿಮ್ಮ ಫ್ಯಾನ್ನಲ್ಲಿರುವ ಎಲ್ಲಾ ಧೂಳನ್ನು ಸ್ವಲ್ಪನೂ ಹರಡದೆ ಕ್ಲೀನ್ ಮಾಡುತ್ತದೆ
ಪಿಲ್ಲೊಕೇಸ್ ಟ್ರಿಕ್
ದಿಂಬಿನ ಕವರ್ ಟ್ರಿಕ್ ಸುಮಾರು ಜನಕ್ಕೆ ಗೊತ್ತಿಲ್ಲ. ಇದೊಂದು ಸಿಲ್ಲಿ ಆದರೆ ಒಂದು ಬುದ್ಧಿವಂತ ಟ್ರಿಕ್ ಆಗಿದೆ. ದಿಂಬಿನ ಹೊದಿಕೆಯನ್ನು ಒಂದೇ ಬ್ಲೇಡ್ನ ಮೇಲೆ ಇರಿಸಿ.
ನಂತರ ಎರಡೂ ಬದಿಗಳಿಂದ ಬ್ಲೇಡ್ ಅನ್ನು ಹಿಡಿದುಕೊಳ್ಳಿ ಮತ್ತು ನಿಧಾನವಾಗಿ ದಿಂಬುಕೇಸ್ ಅನ್ನು ಎಳೆಯಿರಿ. ಹೀಗೆ ಮಾಡೋದರಿಂದ ಎಲ್ಲಾ ಧೂಳು ದಿಂಬಿನ ಕವರ್ ಒಳಗೆ ಬಿದ್ದು, ಫ್ಯಾನ್ ಕ್ಲೀನ್ ಆಗುತ್ತದೆ. ಎಲ್ಲಾ ಇತರ ಬ್ಲೇಡ್ಗಳಲ್ಲಿ ಅದೇ ಪ್ರಕ್ರಿಯೆಯನ್ನು ಪುನರಾವರ್ತಿಸಿ
ನೀರು ಮತ್ತು ಬಟ್ಟೆ
ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಡಿಶ್ ಸೋಪ್ ಮಿಶ್ರಣ ಮಾಡಿ, ಫ್ಯಾನ್ ಬ್ಲೇಡ್ಗಳಿಗೆ ಸಿಂಪಡಿಸಿ. ಅದನ್ನು ಮೈಕ್ರೋಫೈಬರ್ ಬಟ್ಟೆ ಅಥವಾ ಯಾವುದೇ ಇತರ ಶುದ್ಧ ಬಟ್ಟೆಯಲ್ಲಿ ಆ ದ್ರಾವಣವನ್ನು ಒರೆಸಿ. ತೇವಾಂಶವನ್ನು ತೆಗೆದುಹಾಕಲು ಒಣ ಬಟ್ಟೆಯನ್ನು ಬಳಸಿ ಒರೆಸಿ. ಇದು ಈಸಿ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.