ಖಾಲಿ ಹೊಟ್ಟೆಯಲ್ಲಿ ಮೊಸರು ತಿನ್ನುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
ಲೋಕಸಭಾ ಫಲಿತಾಂಶದ ಹೊತ್ತಲ್ಲೇ ಆತಂಕ.. ಚುನಾವಣಾ ಆಯೋಗಕ್ಕೆ ಪತ್ರ ಬರೆದ ಮಂಜುನಾಥ್!
ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ಕೆ ಮಕ್ಕಳಿಗೆ ತಾಯಿ ಮೊಸರು ಹಾಗೂ ಸಕ್ಕರೆ ತಿನ್ನಿಸುತ್ತಾರೆ. ಇದು ಶುಭ ಸೂಚನೆ ಎಂದು ಪರಿಗಣಿಸಲಾಗಿದೆ. ಅದರಂತೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಮೊಸರು ಹಾಗೂ ಸಕ್ಕರೆ ಸೇವನೆಯಿಂದ ದೇಹ ದ್ವಿಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ನಂಬಿಕೆ.
ಬೆಳ್ಳಂಬೆಳಗ್ಗೆ ಮೊಸರು ತಿನ್ನುವುದರಿಂದ ದೇಹ ಮತ್ತು ಮನಸ್ಸು ಎರಡೂ ಆರೋಗ್ಯಕರವಾಗಿರುತ್ತದೆ. ಇದನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲ ಗೊಳ್ಳುತ್ತದೆ. ಬೇಸಿಗೆಯಲ್ಲಿ ಮೊಸರನ್ನು ಬೆಳಗ್ಗೆ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ -12, ವಿಟಮಿನ್ ಬಿ -2, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೇರಳವಾಗಿ ಇರುತ್ತವೆ. ಬೆಳಗ್ಗೆ ಮೊಸರಿಗೆ ಸಕ್ಕರೆಯನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಬೆಳಗಿನ ಜಾವ ಮೊಸರನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಬಹುದು. ಇದರಿಂದ ಪಿತ್ತದ ಸಮಸ್ಯೆ ಕಡಿಮೆ ಆಗುತ್ತದೆ. ಇದನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆಯ ಸಮಸ್ಯೆ ಕಡಿಮೆ ಆಗುತ್ತದೆ.
ಮೊಸರು ತಿನ್ನುವುದು ಯುಟಿಐ ಮತ್ತು ಸಿಸ್ಟೈಟಿಸ್ (cystitis) ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕಡಿಮೆ ನೀರು ಕುಡಿಯುವವರು ಮೊಸರು ತಿನ್ನಬೇಕು.
ಹೊಟ್ಟೆಯ ಸಮಸ್ಯೆ ಇದ್ದವರು ಇದ್ದನ್ನು ಸೇವಿಸಬಹುದಾ?
ಮೊಸರಿನಲ್ಲಿ ಹೊಟ್ಟೆ ಮತ್ತು ಕರುಳಿಗೆ ಬೇಕಾಗಿರುವ ಒಳ್ಳೆಯ ಬ್ಯಾಕ್ಟೀರಿಯಾಗಳಿವೆ. ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಾಗ ಮೊಸರು ತಿನ್ನುವುದರಿಂದ ಕಡಿಮೆ ಆಗಬಹುದು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸಮನಾಗಿಸುತ್ತದೆ. ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.
ಮೊಸರು ಚರ್ಮದ ಮೊಶ್ಚಿರೈಸ್ ಕಡಿಮೆ ಮಾಡುವುದು ಮತ್ತು ಇದು ಒಣ ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನು ಮಿತವಾಗಿ ಸೇವಿಸುವುದರಿಂದ ಜಠರಕರುಳಿನ ಸಮಸ್ಯೆಯಿಂದ ಕೊಂಚ ಪರಿಹಾರವನ್ನು ಪಡೆಯಬಹುದು. ಮೊಸರು ಹೊಟ್ಟೆಯನ್ನು ಆರೋಗ್ಯವಾಗಿಟ್ಟುಕೊಂಡು ಚರ್ಮದ ಆರೋಗ್ಯ ಕಾಪಾಡುವುದು.
ಮೊಸರನ್ನು ತಾಜಾ ಹಣ್ಣುಗಳ ಜೊತೆಗೆ ಸೇವಿಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಇದರಿಂದ ಹೆಚ್ಚಿನ ನಾರಿನಾಂಶವೂ ಲಭಿಸುತ್ತದೆ. ಹೀಗಾಗಿ ಮೊಸರನ್ನು ತಿನ್ನುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.