ರಾಮನಗರ: ರಾಮನಗರದಲ್ಲಿಯೂ ಕೊರೊನಾ ಕೇಸ್ ಹೆಚ್ಚಾಗ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಒಂದೇ ಗ್ರಾಮದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಗೃಹಿಣಿಗೆ ಪಾಸಿಟಿವ್ ಬಂದಿದೆ. ಅಲ್ಲದೇ ಕೆಂಗೇರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಬಿಡದಿ ಗ್ರಾಮದ ಓರ್ವ ವ್ಯಕ್ತಿಗೂ ಕೋವಿಡ್ ಧೃಡಪಟ್ಟಿದೆ. ಆದ್ರೆ ಈ ಮೂವರಿಗೆ ಸಂಬಂಧಿಸಿದ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ಆರೋಗ್ಯ ಇಲಾಖೆ ಖಚಿತ ಪಡೆಸಿದೆ. ಮೂವರ ಕುಟುಂಬಸ್ಥರನ್ನೂ ಕೋವಿಡ್ ಟೆಸ್ಟ್ಗೆ ಒಳಪಡಿಸಿ ಕ್ವಾರಂಟೈನ್ ಮಾಡಿದ್ದು,
Winter Health: ಚಳಿಗಾಲದಲ್ಲಿ ಗಂಟಲು ನೋವು, ಕೆಮ್ಮು ಸಮಸ್ಯೆಯೇ?: ಈ ವಸ್ತುಗಳನ್ನ ತಯಾರಿಸಿ ಟೀ ಕುಡಿದು ನೋಡಿ!
ಜೆಎನ್.1 ಸೋಂಕು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 15 ಹಾಸಿಗೆಗಳ ಎರಡು ಕೋವಿಡ್ ವಾರ್ಡ್, 500 ಲೀ. ಸಾಮರ್ಥ್ಯದ ಎರಡು ಆಕ್ಸಿಜನ್ ಪ್ಲ್ಯಾಂಟ್ಗಳು ಕಾರ್ಯಾರಂಭ ಮಾಡಿವೆ. 4 ವೆಂಟಿಲೇಟರ್ ಹಾಗೂ 19 ಐಸಿಯು ಹಾಸಿಗಳನ್ನ ಕಾಯ್ದಿರಿಸಲಾಗಿದೆ.