ನಿದ್ದೆ ಪ್ರತೀ ಜೀವಿಯ ಆರೋಗ್ಯದ ಗುಟ್ಟು. ದೇಹವನ್ನು ಚಲಶೀಲವಾಗಿಟ್ಟುಕೊಳ್ಳಲು ನಿದ್ದೆ ಸಹಕಾರಿಯಾಗಿದೆ. ಜೊತೆಗೆ ಮೆದುಳನ್ನು ಕ್ರೀಯಾಶೀಲತೆಯಿಂದ ಕೂಡಿರುವಂತೆ ಮಾಡುತ್ತದೆ. ಹೀಗಾಗಿ ನಿದ್ದೆ ಅಗತ್ಯ. ಪ್ರತೀ ಆರೋಗ್ಯವಂತ ವ್ಯಕ್ತಿಗೆ 7 ರಿಂದ 8 ಗಂಟೆಗಳ ನಿದ್ದೆ ಅವಶ್ಯಕವಾಗಿರುತ್ತದೆ. ರಾತ್ರಿ ನಿದ್ದೆ ಆರೋಗ್ಯವನ್ನೂ ಸುಧಾರಿಸುತ್ತದೆ. ಇನ್ನೂ ಕೆಲವರಿಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಅದು ಒಂಥರಾ ಅಡಿಕ್ಟೆಡ್. ಮಧ್ಯಾಹ್ನ ನಿದ್ದೆ ಮಾಡದಿದ್ದರೆ ಏನೋ ಒಂದನ್ನು ಕಳೆದುಕೊಂಡ ಭಾವ. ಕಿರಿಕಿರಿಯನ್ನು ಅನುಭವಿಸುತ್ತಾರೆ.
ಮುಡಾ ಕಚೇರಿ ಮೇಲಿನ ಇಡಿ ದಾಳಿ: ಆಯುಕ್ತರಿಗೆ ಕೇಳಿದ ಪ್ರಶ್ನೆಗಳು ಯಾವುವು ಗೊತ್ತಾ!?
ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ ಮಲಗುವುದು ಸರಿಯೇ? ಅದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮಧ್ಯಾಹ್ನ ಮಲಗುವುದು ಒಳ್ಳೆಯದೇ ಅಥವಾ ಕೆಟ್ಟದ್ದೆ?
ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಅಮೇರಿಕಾರದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರರು ಮಧ್ಯಾಹ್ನದ ವೇಳೆ ನಿದ್ರೆ ಮಾಡುತ್ತಾರೆ. ಮನಸ್ಥಿತಿಯನ್ನು ಸುಧಾರಿಸಲು, ದಿನವಿಡೀ ಕ್ರಿಯಾಶೀಲವಾಗಿರಲು, ಆಯಾಸವನ್ನು ಕಡಿಮೆ ಮಾಡಲು ಕಿರು ನಿದ್ರೆಯು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಆದರೆ ಹಗಲಿನಲ್ಲಿ ಹೆಚ್ಚು ಹೊತ್ತು ಮಲಗಿದರೆ ಅದು ಆರೋಗ್ಯದ ಮೇಲೆ ನರಕಾತ್ಮಕ ಪರಿಣಾಮವನ್ನು ಉಂಟುಮಾಡಬಹುದು.
ಹಗಲಿನಲ್ಲಿ ಮಲಗುವುದರಿಂದ ಉಂಟಾಗುವ ಪರಿಣಾಮ:
ಹಾರ್ವರ್ಡ್ ಹೆಲ್ತ್ ವರದಿ ಹೇಳುವಂತೆ ಹಗಲಿನಲ್ಲಿ ಒಂದು ಸಣ್ಣ ನಿದ್ದೆ ಜ್ಞಾನಪಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ. ಹಾಗಿದ್ದರೂ ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ದೀರ್ಘಾವಧಿಯಲ್ಲಿ ಅನೇಕ ನಕರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎನ್ನುತ್ತಾರೆ ಸಂಶೋಧಕರು. ಮಧ್ಯಾಹ್ನ ಹೆಚ್ಚು ಮಲಗುವುದರಿಂದ ನಿದ್ರೆಯ ಜಡತ್ವ ಉಂಟಾಗುತ್ತದೆ. ನಿದ್ರೆಯ ಜಡತ್ವದಿಂದ ಒಬ್ಬ ವ್ಯಕ್ತಿಯ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹಾಗದೆ ಹಗಲು ಹೊತ್ತಿನಲ್ಲಿ ಮಲಗಬೇಕೇ ಅಥವಾ ಬೇಡವೇ?
ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಬಾಧಿಸುವ ಅಪಾಯ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುತ್ತಿದ್ದೀರಿ ಎಂದರೆ ನೀವು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯುತ್ತಿಲ್ಲ ಎಂದರ್ಥ. ಇದು ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯಿರಿ. ತಜ್ಞರ ಪ್ರಕಾರ ಮದ್ಯಾಹ್ನ ಅರ್ಧ ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದು ಒಳ್ಳೆಯದಲ್ಲ. ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ನಿದ್ರೆಯ ಚಕ್ರಕ್ಕೆ ತೊಂದರೆಯಾಗಬಹುದು.