ಚಿತ್ರದುರ್ಗ:- ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಎಂದು CM ಗೆ ಕಾರಜೋಳ ಪ್ರಶ್ನೆ ಮಾಡಿದ್ದಾರೆ.
ಸಿಎಂ ಆತ್ಮಸಾಕ್ಷಿಗೆ ಅನುಗುಣ ನಡೆಯುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿ ಬಗ್ಗೆ ಮಾತನಾಡಿದ್ದಾರೆ. ಅಕ್ರಮವಾಗಿ ಬೇನಾಮಿ ಆಸ್ತಿ ಪಡೆದುಕೊಳ್ಳುವುದು ಆತ್ಮಸಾಕ್ಷಿಯಾ? ಅಲ್ಲದೇ, ಈ ಕೇಸ್ ವಿಚಾರದಲ್ಲಿ ಕೋರ್ಟ್ ಆದೇಶ ನೀಡಿದ ದಿನವೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂದರು.
ಈಗಲೂ ಕಾಲ ಮಿಂಚಿಲ್ಲ. ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿ. ಹಾಗೆಯೇ ಸಿಎಂ ಸಿದ್ದರಾಮಯ್ಯ ಅಷ್ಟೊಂದು ತಪ್ಪು ಮಾಡಿಲ್ಲವೆಂಬ ಖಚಿತತೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆ ಪ್ರಕರಣದಲ್ಲಿ ಒಂದು ವೇಳೆ ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಅವರೇ ಸಿಎಂ ಆಗಲಿ ಎಂದರು.