ಹುಬ್ಬಳ್ಳಿ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಬರ ತಾಂಡವವಾಡುತ್ತಿದೆ. ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಇತಹ ಸಂದಿಗ್ಧ ಪರಿಸ್ಥಿಯಲ್ಲಿ ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತು. ಗುಳೆ ಹೋಗದ ಹಾಗೆ, ದನ–ಕರುಗಳನ್ನು ಮಾರಾಟ ಮಾಡದ ಹಾಗೆ ತಡೆಯಬೇಕಿತ್ತು. ಗೋ ಶಾಲೆಗಳನ್ನು ಆರಂಭಿಸಿ ಮೇವು ಹಂಚಿಕೆ ಮಾಡಬೇಕಿತ್ತು. ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಅದರ ಬದಲು ರಾಜಕೀಯ ಮಾಡುತ್ತ ಕಾಲ ಹರಣ ಮಾಡುತ್ತಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ ಬಿಜೆಪಿ ವತಿಯಿಂದ ಬರ ಪರಿಶೀಲನೆ ನಡೆಸಿದ ಬಳಿಕ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ ಮಾತುಗಳಿವು. ಛಬ್ಬಿ, ಅಂಚಟಗೇರಿ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 68 ಹಳ್ಳಿಗಳು ಮಲಪ್ರಭಾ ಬಲದಂಡೆಯ ಕಾಲುವೆ ನೀರು ಆಶ್ರಯಿಸಿವೆ. ಮುನವಳ್ಳಿ ಅಣೆಕಟ್ಟೆಯಲ್ಲಿರುವ ನೀರನ್ನು ಕಾಲುವೆಗಳಿಗೆ ಹರಿಸಿ, ಹಳ್ಳಿಗಳ ಕೆರೆ, ಕಟ್ಟೆಗಳನ್ನು ತುಂಬಿಸಲು ಮುಂದಾಗಬಹುದಿತ್ತು. ಬೇಜವಾಬ್ದಾರಿ ಸರ್ಕಾರ ಮುಂದಾಲೋಚನೆಯಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಬಿಜೆಪಿ ಬರ ಅಧ್ಯಯನ ತಂಡ ರಾಜ್ಯದಾದ್ಯಂತ ಬೆಳೆ ನಷ್ಟ ಸಮೀಕ್ಷೆ ನಡೆಸುತ್ತಿದ್ದು, ಇಂದು ಮಾಜಿ ಸಚಿವ ಗೋವಿಂದ ಕಾರಜೊಳ ನೇತೃತ್ವದ ತಂಡ ಹುಬ್ಬಳ್ಳಿ ತಾಲೂಕಿನ ಛಬ್ಬಿ, ಅಂಚಟಗೇರಿ ಗ್ರಾಮಕ್ಕೆ ತೆರಳಿ ರೈತರ ಅಹವಾಲು ಆಲಿಸಿತು. ಧೈರ್ಯ ತುಂಬಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿತು. ಛಬ್ಬಿ ಗ್ರಾಮದ ರೈತ ತವನಪ್ಪ ಬಸಾಪುರ ಅವರು 10 ಎಕರೆ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ನೀರಿಲ್ಲದೆ ಬೆಳೆ ಸಂಪೂರ್ಣ ಹಾಳಾಗಿರುವುದನ್ನು ವೀಕ್ಷಿಸಿದ ಕಾರಜೋಳ ಅವರಿಂದ ಮಾಹಿತಿ ಪಡೆದರು.