ರಾಯಭಾಗ :- ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಅಸಲಿ ಮಾಲೀಕರ ಜಮೀನು ಇನ್ಯಾರೋ ಹೆಸರಲ್ಲಿರುವುದು ಬೆಳಕಿಗೆ ಬಂದಿದೆ.
ಸಬ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕನಗೌಡ್ ಅಧಿಕಾರ ಅವಧಿಯಲ್ಲಿ ನಡೆದ ನಕಲಿ ಜಮೀನು ಮಾರಾಟ.
ರಾಯಬಾಗ ತಾಲೂಕಿನ ಅಳಗವಾಡಿಯ ಗ್ರಾಮದ ಯಲ್ಲವ್ವ ಸಿದ್ದಪ್ಪ ಕಬ್ಬೂರೆ 74 ವರ್ಷ ಇವರ ಆಸ್ತಿ no 72/1 ಇದರ ಪೈಕಿ 12 ಗುಂಟೆ ಜಮೀನು ಇವರಿಗೆ ವಿಠ್ಠಲ್ ಲಕ್ಷ್ಮಣ್ ಹಳ್ಳೂರು ಸಾಕಿನ್ ಹಾರೂಗೇರಿ ಇವರಿಗೆ ಕಬಳಿಕೆ ಮಾಡಲಾಗಿದೆ ಎಂದು ಅಜ್ಜಿ ಯಲ್ಲವ್ವಾ ಸಿದ್ದಪ್ಪ ಕಬ್ಬೂರೆ ಸಬ್ ರಿಜಿಸ್ಟ್ರಾರ್ ಅಧಿಕಾರಿ ವಿರುದ್ದ ಆರೋಪ ಮಾಡಿದ್ದಾರೆ.
ಇನ್ನೂ ರಾಯಬಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇದು ಹಿಂಗೆ ಆಸ್ತಿ ಕಬಳಿಕೆ ನಡೆದಿದ್ದು ನಾಲ್ಕನೇ ಬಾರಿ ಎಂದು ಸ್ಥಳದಲ್ಲಿ ನೆರದಿದ್ದ ಜನ ಹೇಳುತ್ತಿದ್ದಾರೆ.
ಸಬ್ ರಿಜಿಸ್ಟ್ರಾರ ಅಧಿಕಾರಿ ರವಿ ಸಂಕಣಗೌಡ ಅವರನ್ನ ಕೇಳಿದರೆ ನಾನು ಆ ದಿನ ನಾನು ಇರಲಿಲ್ಲ ಬೇರೆ ಅಧಿಕಾರಿ ಇಂಚಾರ್ಜ್ ಮೇಲೆ ಈ ಕಚೇರಿಯಲ್ಲಿ ಇದ್ದರೂ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ
ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಬ್ ರಿಜಿಸ್ಟ್ರಾರ ಕಚೇರಿಯ ಅಧಿಕಾರಿಗಳ ಒಳ ಒಪ್ಪಂದ ಮಾಡಿಕೊಂಡು ಈ ನನ್ನ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಅಜ್ಜಿ ಯಲ್ಲವ್ವ ಕಬ್ಬೂರೆ ರಾಯಬಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿ ವಿರುದ್ದ ಗಲಾಟೆ ಮಾಡಿದ್ದಾರೆ.
ಈ ವೇಳೆ ಸ್ಥಳೀಯ ಪತ್ರಕರ್ತರು ವಿಡಿಯೋ ಮಾಡುತಿದ್ದಾಗ ಸಬ್ ರಿಜಿಸ್ಟ್ರಾರ್ ಅಧಿಕಾರಿ ರವಿ ಸಂಕನಗೌಡ್ ಪತ್ರಕರ್ತರಿಗೆ ನಾಲಿಗೆ ಹರಿ ಬಿಟ್ಟು ತನ್ನ ಸಿಬ್ಬಂದಿಗಳಿಂದ ಮೊಬೈಲ್ ನಲ್ಲಿ ವಿಡಿಯೋ ಮಾಡುವುದಕ್ಕೆ ಮುಂದಾಗಿದ್ದಾರೆ
ಅಷ್ಟೇ ಅಲ್ಲದೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ನಿರಂತರ ಇದ್ದರೂ ಬೆಳಗಾವಿ ಸಂಬಂಧಪಟ್ಟ ಮೇಲಾಧಿಕಾರಿಗಳು ತಮಗೆ ಸಂಬಂಧವೇ ಇಲ್ಲದಂತೆ ತೋರುತ್ತಿದ್ದಾರೆ.
ಇನ್ನೂ ಈ ಅಜ್ಜಿ ತನ್ನ ಜಮೀನು ನನ್ನ ಹೆಸರಿಗೆ ಆಗುವ ವರೆಗೂ ಈ ಕಚೇರಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಇನ್ನಾದರೂ ಇಂತಹ ಬ್ರಷ್ಟ ಅಧಿಕಾರಿಯ ಮೇಲೆ ಮೇಲಧಿಕಾರಿಗಳು ಮುನ್ನೆಚ್ಚರವಹಿಸಬೇಕಾಗಿದೆ.
ವರದಿ : ಎಂ. ಕೆ. ಸಪ್ತಸಾಗರ