ಯಶಸ್ವಿ ಜೈಸ್ವಾಲ್ ಅವರನ್ನು ಮಾಜಿ ನಾಯಕ ಸೌರವ್ ಗಂಗೂಲಿಗೆ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೋಲಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದರು. ಹೈದರಾಬಾದ್ ಟೆಸ್ಟ್ನಲ್ಲಿ ಅರ್ಧಶತಕ ಸಿಡಿಸಿದ್ದ ಜೈಸ್ವಾಲ್ ವಿಶಾಖಪಟ್ಟಣಂ ಟೆಸ್ಟ್ ಪ್ರಥಮ ಇನಿಂಗ್ಸ್ನಲ್ಲಿ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿದ್ದರು
Eng Vs Ind Test Series: ಕೆ.ಎಲ್ ರಾಹುಲ್ ಬಿಟ್ಟು ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ BCCI
ಸ್ಟಾರ್ ಸ್ಪೋರ್ಟ್ಸ್ನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಹೋಲಿಸಿದ್ದಾರೆ. ಆಫ್ ಸೈಡ್ ಬ್ಯಾಟಿಂಗ್ ನೋಡಿದಾಗ ಜೈಸ್ವಾಲ್ ಅವರು ಗಂಗೂಲಿ ಆಟಕ್ಕೆ ಬಹಳಾ ಹತ್ತಿರದಿಂದ ಕಾಣುತ್ತಾರೆ. ಪ್ರಸ್ತುತ ಇದೇ ಆಟವನ್ನು ಜೈಸ್ವಾಲ್ ಮುಂದುವರಿಸಿದರೆ, ದೀರ್ಘಾವಧಿ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂದು ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.