RCB ಸತತ 5 ಕಪ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ ಎಂದು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಹೇಳಿದ್ದಾರೆ.
ಮನೆಗಳ ಒತ್ತುವರಿ ತೆರವು ಕಾರ್ಯಾಚರಣೆ: KIADB ಅಧಿಕಾರಿಗಳ ನಡೆ ಬಗ್ಗೆ ಪರಿಷತ್ ಶಾಸಕ ಟಿ.ಎ.ಶರವಣ ಅಸಮಾಧಾನ
ಈ ಸಂಬಂಧ ಮಾತನಾಡಿದ ಅವರು, 17 ವರ್ಷಗಳು… ಒಂದೇ ಒಂದು ಕಪ್ ಗೆದ್ದಿಲ್ಲ… ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ… ಕೊನೆಗೆ ನೋವಿನ ವಿದಾಯ. ಆದರೆ ಈ ಬಾರಿ ಹಾಗೆ ಆಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ
ನಮ್ಮ ತಂಡವು ಈ ಬಾರಿ ತುಂಬಾ ಬಲಿಷ್ಠವಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಅನುಭವ ಹೊಂದಿರುವ ಆಟಗಾರರು ತಂಡದಲ್ಲಿದ್ದಾರೆ.
ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಮತ್ತು ಸುಯಶ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ. ಹಾಗೆಯೇ ಯಶ್ ದಯಾಳ್ ಅವರಂತಹ ಬಲಿಷ್ಠ ಭಾರತೀಯ ಬೌಲರ್ಗಳನ್ನು ಹೊಂದಿದ್ದೇವೆ. ಅತ್ತ ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್ ಅವರಂತಹ ಅತ್ಯುತ್ತಮ ವಿದೇಶಿ ಆಟಗಾರರು ಸಹ ತಂಡದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಆರ್ಸಿಬಿ ತಂಡವು ಉತ್ತಮ ಸಮತೋಲನದಿಂದ ಕೂಡಿದೆ ಎನ್ನಬಹುದು. ಹಾಗಾಗಿ ಈ ಬಾರಿ ಆರ್ಸಿಬಿ ತಂಡದಿಂದ ಕಪ್ ಅನ್ನು ನಿರೀಕ್ಷಿಸಬಹುದು ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಇನ್ನು ಆರ್ಸಿಬಿ ಲೀಗ್ ಹಂತದಲ್ಲಿ ಆಡಲಿರುವ 14 ಪಂದ್ಯಗಳಲ್ಲಿ 11 ಮ್ಯಾಚ್ಗಳನ್ನು ನಾನೇ ಗೆಲ್ಲಿಸಿಕೊಡಬೇಕೆಂದು ಬಯಸುತ್ತೇನೆ. ಇನ್ನು ಮೂರು ಪಂದ್ಯಗಳನ್ನು ಲಿಯಾಮ್ ಲಿವಿಂಗ್ಸ್ಟೋನ್ ಗೆಲ್ಲಿಸಲಿ. ಈ ಮೂಲಕ ಲೀಗ್ ಹಂತದಲ್ಲೇ ಆರ್ಸಿಬಿ ತಂಡದ ಪಾರುಪತ್ಯವನ್ನು ಎದುರು ನೋಡುತ್ತಿರುವುದಾಗಿ ಜಿತೇಶ್ ಶರ್ಮಾ ಹೇಳಿದ್ದಾರೆ.
ಮಾತು ಮುಂದುವರೆಸಿದ ಜಿತೇಶ್ ಶರ್ಮಾ, ನಾವು ಈವರೆಗೆ ಟ್ರೋಫಿ ಗೆದ್ದಿಲ್ಲ ಎಂಬುದು ನಿಜ. ಆದರೆ ಒಮ್ಮೆ ನಾವು ಕಪ್ ಗೆಲ್ಲಲಿ… ಆ ಬಳಿಕ ಸತತ 5 ಟ್ರೋಫಿಗಳನ್ನು ಗೆಲ್ಲಲಿದ್ದೇವೆ ಎಂಬ ವಿಶ್ವಾಸವನ್ನು ಸಹ ವ್ಯಕ್ತಪಡಿಸಿದ್ದಾರೆ.