ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಲವು ಅಚ್ಚರಿಯ ಖರೀದಿಗಳು ನಡೆಯುತ್ತಿದೆ. ರಾಹುಲ್ ಆರ್ಸಿಬಿ ಪರ ಕಣಕ್ಕಿಳಿಯುತ್ತಾರೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಏಕೆಂದರೆ ರಾಹುಲ್ರನ್ನು ಖರೀದಿಸಲು ಆರ್ಸಿಬಿ ಮನಸು ಮಾಡಲಿಲ್ಲ. ಹೀಗಾಗಿ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
IPL Auction 2025: ಫ್ಯಾನ್ಸ್ ಗೆ ಬಿಗ್ ಶಾಕ್; ಸಿರಾಜ್ ಕೈ ಬಿಟ್ಟ RCB!
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಾಹುಲ್ರನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಕೆಎಲ್ ರಾಹುಲ್ ಐಪಿಎಲ್ನ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಆದರೆ 2022 ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ರಾಹುಲ್, ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ಕಾರಣದಿಂದಾಗಿ ಲಕ್ನೋ ಅವರನ್ನು ತಂಡದಿಂದ ಕೈಬಿಟ್ಟಿತ್ತು.
2013 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ರಾಹುಲ್, ಇಲ್ಲಿಯವರೆಗೆ ಐಪಿಎಲ್ನಲ್ಲಿ 132 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 4 ಶತಕ ಮತ್ತು 37 ಅರ್ಧ ಶತಕಗಳೊಂದಿಗೆ 4,683 ರನ್ ಗಳಿಸಿದ್ದಾರೆ. ಇದಲ್ಲದೇ ರಾಹುಲ್ 6 ಸೀಸನ್ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಸೀಸನ್ನಲ್ಲಿಯೂ ಅವರು 520 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು.
ಹರಾಜಿಗೆ ಬರುವ ರಾಹುಲ್ರನ್ನು ಆರ್ಸಿಬಿ ಖರೀದಿಸಲಿದೆ ಎಂದು ಎಲ್ಲಾ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆರಂಭದಲ್ಲಿ ರಾಹುಲ್ರನ್ನು ಖರೀದಿಸಲು ಮುಂದಾಗಿದ್ದ ಆರ್ಸಿಬಿ, ಆ ಬಳಿಕ ಹಿಂದಕ್ಕೆ ಸರಿಯಿತು.