ಚೆನ್ನೈ: 17ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಚೆನ್ನೈನ ಚಿದಂಬರಂ (ಚೆಪಾಕ್) ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಂಜೆ 6:30ಕ್ಕೆ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಕೊಹ್ಲಿ ಮೈಲುಗಲ್ಲಿಗೆ ಒಂದು ರನ್ ಬಾಕಿ:
ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳ ನಡುವಿನ ಪರಸ್ಪರ ಮುಖಾಮುಖಿಯಲ್ಲಿ ಅಧಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಲ್ಲಿದೆ. ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಬರೋಬ್ಬರಿ 999 ರನ್ ಗಳಿಸಿದ್ದಾರೆ. ಅವರು ಇನ್ನು 1 ರನ್ ಗಳಿಸಿದರೆ, ತಂಡವೊಂದರ ವಿರುದ್ಧ 1,000 ರನ್ ಪೂರೈಸಿದ ಆರ್ಸಿಬಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಸಿಎಸ್ಕೆ ತಂಡದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಉಭಯ ತಂಡಗಳ ಪೈಪೋಟಿಯಲ್ಲಿ ಗರಿಷ್ಠ 18 ವಿಕೆಟ್ಗಳನ್ನು ಪಡೆದಿದ್ದಾರೆ. ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಡ್ಡುಗೆ ಅಗ್ರಸ್ಥಾನವಿದೆ. ಇನ್ನೂ ಆರ್ಸಿಬಿ ವಿರುದ್ಧ ಶಿವಂ ದುಬೆ (Shiva Dubey) ಅಜೇಯ 95 ರನ್ ಗಳಿಸುವ ಮೂಲಕ, ಉಭಯ ತಂಡಗಳ ಮುಖಾಮುಖಿಯ ಪಂದ್ಯವೊಂದರಲ್ಲೇ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ ದಾಖಲೆ ಹೊಂದಿದ್ದಾರೆ.