ಸಿರಾಜ್ರನ್ನು ಖರೀದಿಸಲು ಮೊದಲು ಗುಜರಾತ್ ಟೈಟಾನ್ಸ್ ಮುಂದಾಯಿತು. ಇದರ ಜೊತೆಗೆ ಸಿಎಸ್ಕೆ ಕೂಡ ಆಸಕ್ತಿ ತೋರಿತು. 8 ಕೋಟಿ ರೂವರೆಗೂ ಬಿಡ್ ಮಾಡಿದ ಸಿಎಸ್ಕೆ ಆ ನಂತರ ಹಿಂದೆ ಸರಿಯಿತು. ಇಲ್ಲಿ ರೇಸ್ಗೆ ಎಂಟ್ರಿಕೊಟ್ಟ ರಾಜಸ್ಥಾನ್ ರಾಯಲ್ಸ್ 12 ಕೋಟಿ ಬಿಡ್ ಮಾಡಿತು. ಆದರೆ ಗುಜರಾತ್ 12.25 ಕೋಟಿ ನೀಡಿ ಸಿರಾಜ್ರನ್ನು ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆರ್ಸಿಬಿ ಆರ್ಟಿಎಮ್ ಕಾರ್ಡ್ ಬಳಸಿ ಸಿರಾಜ್ರನ್ನು ಉಳಿಸಿಕೊಳ್ಳಬಹುದು ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ, ಇಷ್ಟು ವರ್ಷ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿಕೊಂಡು ಬಂದಿದ್ದ ಸಿರಾಜ್ರನ್ನು ಉಳಿಸಿಕೊಳ್ಳಲು ನೋಡಲಿಲ್ಲ. ಹೀಗಾಗಿ ಸಿರಾಜ್ ಬಹಳ ವರ್ಷಗಳ ನಂತರ ಐಪಿಎಲ್ನಲ್ಲಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದುವರೆಗೆ ಐಪಿಎಲ್ನಲ್ಲಿ 93 ಪಂದ್ಯಗಳನ್ನಾಡಿರುವ ಸಿರಾಜ್, 8.65 ಎಕಾನಮಿಯಲ್ಲಿ 93 ವಿಕೆಟ್ ಉರುಳಿಸಿದ್ದಾರೆ. ಸಿರಾಜ್ ಇದುವರೆಗೆ ಭಾರತದ ಪರ 16 ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 14 ವಿಕೆಟ್ಗಳಿವೆ. 17 ರನ್ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.