2025ರ IPL ಮೆಗಾ ಹರಾಜು ಮುಗಿದಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೆಚ್ಚು ಹಣ ಇದ್ದರೂ ಸ್ಟಾರ್ ಆಟಗಾರರಿಗೆ ಮಣೆ ಹಾಕಲಿಲ್ಲ. ಅದರಲ್ಲಿ ಕನ್ನಡಿಗ ರಾಹುಲ್ ಕೂಡ ಒಬ್ಬರು.
ಇಂದು ಮಾಜಿ ಸಿಎಂ ಎಸ್ಎಂ ಕೃಷ್ಣ ಅಂತ್ಯಕ್ರಿಯೆ; ಚಿತೆಗೆ ಅಗ್ನಿಸ್ಪರ್ಶ ಮಾಡಲಿರುವ ಮೊಮ್ಮಗ ಅಮರ್ಥ್ಯ
ಹರಾಜಿನಲ್ಲಿ ಕೆಎಲ್ ರಾಹುಲ್ ಅವರ ಖರೀದಿಗೆ ಆರ್ಸಿಬಿ ಹೆಚ್ಚಿನ ಆಸಕ್ತಿ ತೋರದಿರುವುದು ಸ್ಪಷ್ಟವಾಗಿತ್ತು. ಏಕೆಂದರೆ ರಾಹುಲ್ಗಾಗಿ 7 ಕೋಟಿ ರೂ.ಗಿಂತ ಅಧಿಕ ಮೊತ್ತ ವ್ಯಯಿಸಲು ಆರ್ಸಿಬಿ ಮುಂದಾಗಿರಲಿಲ್ಲ. ಇದಕ್ಕೆ ಕಾರಣವೇನು ಎಂಬುದಕ್ಕೆ ಇದೀಗ ಸ್ಪಷ್ಟ ಉತ್ತರ ಸಿಕ್ಕಿದೆ.
ಆರ್ಸಿಬಿ ತಂಡದ ಹರಾಜು ಟಾರ್ಗೆಟ್ ಲಿಸ್ಟ್ ಬಹಿರಂಗವಾಗಿದ್ದು, ಈ ಹರಾಜು ಪಟ್ಟಿಯಲ್ಲಿ ಕೆಎಲ್ ರಾಹುಲ್ ಅವರ ಹೆಸರು C ಪಟ್ಟಿಯಲ್ಲಿತ್ತು. ಅಂದರೆ ಆರ್ಸಿಬಿ ಪಾಲಿಗೆ ರಾಹುಲ್ ಮೊದಲ ಆಯ್ಕೆ ಆಗಿರಲಿಲ್ಲ. ಹೀಗಾಗಿಯೇ ಕೆಎಲ್ ರಾಹುಲ್ ಅವರ ಖರೀದಿಗೆ ಆರ್ಸಿಬಿ ಹೆಚ್ಚಿನ ಆಸಕ್ತಿ ತೋರಲಿಲ್ಲ.
ಹೀಗಾಗಿ 7 ಕೋಟಿ ರೂ. ಬಳಿಕ ಆರ್ಸಿಬಿ ಫ್ರಾಂಚೈಸಿ ಕನ್ನಡಿಗನಿಗಾಗಿ ಬಿಡ್ ಮಾಡಲು ಮುಂದಾಗಿಲ್ಲ. ಇದರೊಂದಿಗೆ ತವರು ತಂಡದ ಪರ ಕಣಕ್ಕಿಳಿಯಬೇಕೆಂಬ ಕೆಎಲ್ ರಾಹುಲ್ ಅವರ ಬಹುಕಾಲದ ಕನಸು ಕಮರಿತು. ಇತ್ತ ರಾಹುಲ್ ಕಂಬ್ಯಾಕ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಕೂಡ ನಿರಾಸೆಗೊಂಡರು.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿಸಿದೆ. ಇದಕ್ಕೆ ಕಾರಣ 6ನೇ ಕ್ರಮಾಂಕಕ್ಕಾಗಿ ಜಿತೇಶ್ ಶರ್ಮಾರನ್ನು ಆರ್ಸಿಬಿ ಮೊದಲೇ ಟಾರ್ಗೆಟ್ ಮಾಡಿತ್ತು.
ಹೀಗಾಗಿ ಯುವ ವಿಕೆಟ್ ಕೀಪರ್ ಬ್ಯಾಟರ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 11 ಕೋಟಿ ರೂ. ವ್ಯಯಿಸಿದೆ. ಅದರಂತೆ ಇದೀಗ ಆರ್ಸಿಬಿ ತಂಡದಲ್ಲಿ ವಿಕೆಟ್ ಕೀಪರ್ಗಳಾಗಿ ಫಿಲ್ ಸಾಲ್ಟ್ ಹಾಗೂ ಜಿತೇಶ್ ಶರ್ಮಾ ಕಾಣಿಸಿಕೊಂಡಿದ್ದಾರೆ.