IPL ಮೆಗಾ ಹರಾಜಿನ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಜಾಮೀನು ವಿಚಾರ ಕೇಳಿ ಖುಷಿಪಟ್ಟ ನಟ ದರ್ಶನ್! ಜೈಲಿನತ್ತ ಧಾವಿಸುತ್ತಿರುವ ಅಭಿಮಾನಿಗಳು
ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಬಿಡ್ಡಿಂಗ್ ಬೆಲೆ 30 ಲಕ್ಷ ರೂ. ಇರಲಿದೆ. ಇದಕ್ಕೂ ಮುನ್ನ ಕನಿಷ್ಠ ಹರಾಜು ಮೊತ್ತ 20 ಲಕ್ಷ ರೂ. ಆಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.
ಅಂದರೆ ಇಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಕನಿಷ್ಠ ಮೂಲ ಬೆಲೆ 30 ಲಕ್ಷ ರೂ. ಆಗಿರಲಿದೆ. ಹಾಗೆಯೇ 50 ಲಕ್ಷ ರೂ., 1 ಕೋಟಿ ರೂ. ಹಾಗೂ 1.5 ಕೋಟಿ ರೂ. ಮೂಲ ಬೆಲೆಯಲ್ಲಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ ಇಲ್ಲಿ ಗರಿಷ್ಠ ಮೂಲ ಬೆಲೆ 2 ಕೋಟಿ ರೂ. ನಿಗದಿ ಮಾಡಲಾಗಿದೆ..
ಅದರಂತೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಆಟಗಾರರನ್ನು ಖರೀದಿಸಲು 30 ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಈ ಮೂಲಕ ಹೊಸ ಆಟಗಾರರಿಗೆ ಹೆಚ್ಚಿನ ಮೊತ್ತ ಸಿಗುವಂತೆ ಮಾಡಲು ಬಿಸಿಸಿಐ ಮುಂದಾಗಿದೆ.
ಇನ್ನು ಈ ಬಾರಿಯ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, 18ನೇ ಸೀಸನ್ನ ಮೆಗಾ ಆಕ್ಷನ್ಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಆತಿಥ್ಯವಹಿಸಲಿದೆ. ಅಂದರೆ ಅರಬ್ಬರ ನಾಡಿನಲ್ಲಿ ಆಟಗಾರರ ಐಪಿಎಲ್ ಭವಿಷ್ಯ ನಿರ್ಧಾರವಾಗಲಿದೆ.