RCB ತಂಡ ಸೇರಿರೋದು ದೇವರ ಆಶೀರ್ವಾದ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಚರಂಡಿಗಳ ಅಸ್ವಸ್ಥತೆ: ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತಿದೆ ಮದಭಾವಿ ಗ್ರಾಮ ಪಂಚಾಯ್ತಿ!
ಆರ್ಸಿಬಿ ಅಭಿಮಾನಿಗಳನ್ನು ಹಾಡಿ ಹೊಗಳಿರುವ ಜಿತೇಶ್ ಶರ್ಮಾ, ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ ತಿಳಿಸಿದರು. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ, ಉತ್ತಮ ತಂಡ ಖರೀದಿಸುತ್ತದೆ ಎನ್ನುವ ವಿಶ್ವಾಸವಿತ್ತು, ಆರ್ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಹರಾಜಿನಿಂದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ, ಮುಕ್ತವಾಗಿ ಆಡುವ ಮತ್ತು ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಅವಕಾಶ ನೀಡುವ ತಂಡಕ್ಕಾಗಿ ಆಡಬೇಕು ಎನ್ನುವ ಆಸೆ ಇತ್ತು, ಆರ್ಸಿಬಿ ನನ್ನನ್ನು ಖರೀದಿ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು, ಆರ್ ಸಿಬಿ ನನಗೆ ಪರಿಪೂರ್ಣ ತಂಡವಾಗುತ್ತದೆ ಎನ್ನುವ ವಿಶ್ವಾಸವಿದೆ” ಎಂದರು.
ವಿರಾಟ್ ಕೊಹ್ಲಿ ಜೊತೆ ಆಡಲು ನಾನು ಕಾಯುತ್ತಿದ್ದೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಅವರ ಫಿಟ್ನೆಸ್ ನನಗೆ ಯಾವಾಗಲೂ ಸ್ಪೂರ್ತಿಯಾಗಿದೆ. ಅವರ ಜೊತೆ ಆಡಲು ನನಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.