IPL ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಡೆಲ್ಲಿ ತಂಡಕ್ಕೆ RCB ಮಾಜಿ ನಾಯಕ ಎಂಟ್ರಿ ಕೊಟ್ಟಿದ್ದಾರೆ.
ನಿಮ್ಮ ಕೈ ಮತ್ತು ಚರ್ಮದಲ್ಲಿ ಈ ಲಕ್ಷಣ ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಸೂಚನೆ!
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ತಂಡಕ್ಕೆ ಹೊಸ ಮೆಂಟರ್ನ ಆಯ್ಕೆ ಮಾಡಿಕೊಂಡಿದೆ. ಹೀಗೆ ಮೆಂಟರ್ ಆಗಿ ಎಂಟ್ರಿ ಕೊಟ್ಟವರು ಆರ್ಸಿಬಿ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್.
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಐಪಿಎಲ್ನಲ್ಲಿ ಆರ್ಸಿಬಿ, ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ 2009 ರಲ್ಲಿ ಆರ್ಸಿಬಿ ಹಾಗೂ 2014 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿಯೂ ಕಾಣಿಸಿಕೊಂಡಿದ್ದರು.
ಇದೀಗ 11 ವರ್ಷಗಳ ಹಿಂದೆ ನಾಯಕರಾಗಿ ಕಾಣಿಸಿಕೊಂಡ ಫ್ರಾಂಚೈಸಿ ಪರವೇ ಮೆಂಟರ್ ಆಗಿ ರಿಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದರಂತೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಪೀಟರ್ಸನ್ ಡೆಲ್ಲಿ ಕ್ಯಾಪಿಟಲ್ಸ್ ಬಳಗದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಐಪಿಎಲ್ನಲ್ಲಿ 36 ಪಂದ್ಯಗಳನ್ನಾಡಿರುವ ಕೆವಿನ್ ಪೀಟರ್ಸನ್ 1 ಭರ್ಜರಿ ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 1001 ರನ್ ಕಲೆಹಾಕಿದ್ದಾರೆ. ಹಾಗೆಯೇ ಇಂಗ್ಲೆಂಡ್ ಪರ 37 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ 7 ಅರ್ಧಶತಕಗಳೊಂದಿಗೆ ಒಟ್ಟು 1176 ರನ್ ಬಾರಿಸಿದ್ದಾರೆ. ಈ ಅನುಭವದೊಂದಿಗೆ ಪೀಟರ್ಸನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅದೃಷ್ಟ ಬದಲಿಸಲಿದ್ದಾರಾ ಕಾದು ನೋಡಬೇಕಿದೆ.