ಮೆಗಾ ಹರಾಜಿಗೂ ಮುನ್ನವೇ ಐಪಿಎಲ್ನಿಂದ ಬೆನ್ ಸ್ಟೋಕ್ಸ್ ಔಟ್ ಆಗಿದ್ದಾರೆ. ಈ ಬಾರಿಯ ಮೆಗಾ ಹರಾಜಿಗಾಗಿ ಇಂಗ್ಲೆಂಡ್ನ 52 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಾಗ್ಯೂ ಸ್ಟೋಕ್ಸ್ ಅವರು ಹೆಸರು ರಿಜಿಸ್ಟರ್ ಮಾಡಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಮುಂಬರುವ ಆ್ಯಶಸ್ ಸರಣಿ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಸ್ಟೋಕ್ಸ್ ಐಪಿಎಲ್ ಸೀಸನ್-18 ರಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ
ಮುಡಾ ಹಗರಣ: ಮೊದಲ ಬಾರಿ ಭ್ರಷ್ಟಾಚಾರ ಕೇಸ್ ತನಿಖೆಗೆ ಹಾಜರಾದ CM ಸಿದ್ದರಾಮಯ್ಯ.!
ಇದಕ್ಕೂ ಮುನ್ನ ಐಪಿಎಲ್ 2023 ರ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 16.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಗಾಯದ ಕಾರಣ ಸ್ಟೋಕ್ಸ್ ಆಡಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಅಲ್ಲದೆ ಐಪಿಎಲ್ 2024 ರಿಂದ ಹೊರಗುಳಿದಿದ್ದರು. ಇದೀಗ ಐಪಿಎಲ್ 2025 ರಿಂದಲೂ ಸ್ಟೋಕ್ಸ್ ಹಿಂದೆ ಸರಿದಿದ್ದಾರೆ.
ಐಪಿಎಲ್ನ ಹೊಸ ನಿಯಮಗಳ ಪ್ರಕಾರ, ತಂಡಗಳಿಗೆ ಆಯ್ಕೆಯಾದ ಬಳಿಕ ಟೂರ್ನಿಯಿಂದ ಹಿಂದೆ ಸರಿದರೆ ಆ ಆಟಗಾರನ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಈ ನಿಯಮವು ಈ ಬಾರಿಯ ಮೆಗಾ ಹರಾಜಿನಿಂದಲೇ ಚಾಲ್ತಿಗೆ ಬರಲಿದೆ. ಹೀಗಾಗಿಯೇ ಬೆನ್ ಸ್ಟೋಕ್ಸ್ ಮೆಗಾ ಹರಾಜಿಗೂ ಮುನ್ನವೇ ಐಪಿಎಲ್ಗೆ ತಮ್ಮ ಅಲಭ್ಯತೆಯನ್ನು ತಿಳಿಸಿ, ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಒಂದು ವೇಳೆ ಮೆಗಾ ಹರಾಜಿನ ಮೂಲಕ ಆಯ್ಕೆಯಾಗಿ ಆ ಬಳಿಕ ಟೂರ್ನಿಯಿಂದ ಹಿಂದೆ ಸರಿದರೆ, ಆ ಆಟಗಾರನ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಇದರಿಂದ 2 ವರ್ಷಗಳ ಕಾಲ ಐಪಿಎಲ್ನಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿಯೇ ಈ ಬಾರಿ ಐಪಿಎಲ್ಗೆ ಆಯ್ಕೆಯಾದ ಯಾವುದೇ ಆಟಗಾರ ನಿರ್ದಿಷ್ಟ ಕಾರಣಗಳಿಲ್ಲದೇ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿಲ್ಲ.