ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಬಿಸಿಸಿಐ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದೆ. 2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಹೌದು 2026 ರಲ್ಲಿ ನಡೆಯಲ್ಲಿರುವ ಐಪಿಎಲ್ ಮಾರ್ಚ್ 15 ರಿಂದ ಮೇ 31 ರವರೆಗೆ ನಡೆದರೆ, 2027 ರ ಐಪಿಎಲ್ ಮಾರ್ಚ್ 14 ರಿಂದ ಮೇ 30 ರವರೆಗೆ ನಡೆಯಲ್ಲಿದೆ. ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿರುವಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ಬಿಸಿಸಿಐ, ಇ-ಮೇಲ್ ಮುಖಾಂತರ ಈ ಮಾಹಿತಿ ರವಾನೆ ಮಾಡಿದೆ.
ಆ ಪ್ರಕಾರ, ಇದೀಗ ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಮೂರರ ಪೈಕಿ, ಮುಂದಿನ ವರ್ಷ ನಡೆಯಲ್ಲಿರುವ ಐಪಿಎಲ್ನ ಸಂಪೂರ್ಣ ವೇಳಾಪಟ್ಟಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ.
ನಿಮಗೆ ಗೊತ್ತೆ..? ಈ ಬೀಜ ನೆನೆಸಿಟ್ಟ ನೀರು ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!
ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.
ವೇಳಾಪಟ್ಟಿ ಪ್ರಕಟಣೆಯಿಂದಾಗಿ ಫ್ರ್ಯಾಂಚೈಸಿಗಳು ಹಾಗೂ ಆಟಗಾರರು ಹರಾಜು ಪ್ರಕ್ರಿಯೆಗಾಗಿ ಯೋಜನೆಯನ್ನು ಹಾಕಿಕೊಳ್ಳಲು ಸಹಕಾರಿಯಾಗುತ್ತದೆ. ಮುಂದಿನ ಮೂರು ಐಪಿಎಲ್ ಸೀಸನ್ಗಳಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಲಭ್ಯತೆಯನ್ನು ಬಿಸಿಸಿಐ ದೃಢಪಡಿಸಿದೆ.