ಐಪಿಎಲ್ 17ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯಲಿದೆ.
ಏಕದಿನ ವಿಶ್ವಕಪ್ ವಿಜೇತ ಆಸೀಸ ತಂಡದ ತಾರೆಯರಾದ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಬೆಂಗಳೂರು ಮೂಲದ ನ್ಯೂಜಿಲೆಂಡ್ನ ರಚಿನ್ ರವೀಂದ್ರ , ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೋಟ್ಜೀ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.
ಭಾರತೀಯರಲ್ಲಿ ಕನ್ನಡಿಗ ಮನೀಷ್ ಪಾಂಡೆ, ಆರ್ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್ ಹಾಗೂ ಶಾರುಖ್ ಖಾನ್ಗೆ ಉತ್ತಮ ಉತ್ತಮ ಬೇಡಿಕೆ ಪಡೆಯುವ ನಿರೀಕ್ಷೆ ಇದೆ. ದೇಶಿಯ ಆಟಗಾರರ ಪೈಕಿ ವಿಜಯ್ ಹಜಾರೆ ಟ್ರೋಫಿಯಲ್ಲಿ ವೇಗದ ಶತಕ ಸಿಡಿಸಿದ ಉರ್ವಿಲ್ ಪಟೇಲ್, ವೇಗಿ ಸಿದ್ದಾರ್ಥ್ ಕೌಲ್, ಕಾರ್ತಿಕ್ ತ್ಯಾಗಿ ಸಹ ಉತ್ತಮ ಮೊತ್ತ ಪಡೆಯುವ ನಿರೀಕ್ಷೆ ಇದೆ. ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
214 ಭಾರತೀಯರು,119 ವಿದೇಶೀಯರ ಸಹಿತ ಒಟ್ಟು 333 ಆಟಗಾರರು ಹರಾಜು ಕಣದಲ್ಲಿದ್ದಾರೆ. ಇದರಲ್ಲಿ 30 ವಿದೇಶಿಯರು ಸೇರಿ ಗರಿಷ್ಠ 77 ಆಟಗಾರರು ಮಾತ್ರ ಸೇಲಾಗುವ ಅವಕಾಶವಿದೆ.