ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಒಟ್ಟು 14 ಆಟಗಾರರು ಅದೃಷ್ಟ ಪರೀಸಲಿದ್ದಾರೆ.
ರಾಜ್ಯದ ಬ್ಯಾಟರ್ಗಳಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ತಲಾ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ರಾಜ್ಯದ ಉಳಿದ 12 ಆಟಗಾರರು ತಲಾ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಲಿ ದೇಶೀಯ ಕ್ರಿಕೆಟ್ ಋತುವಿನಲ್ಲಿ ವಿದರ್ಭಕ್ಕೆ ವಲಸೆ ಹೋಗಿರುವ ಕರುಣ್ ನಾಯರ್, ವಿಸಿಎ ಕಡೆಯಿಂದ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ರೀತಿ ಕೇರಳಕ್ಕೆ ವಲಸೆ ಹೋಗಿರುವ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಮಿಜೋರಾಂಗೆ ವಲಸೆ ಹೋಗಿರುವ ಕೆಸಿ ಕಾರ್ಯಪ್ಪ ಕೂಡ ಹರಾಜಿನಲ್ಲಿದ್ದಾರೆ. ಇನ್ನುಳಿದಂತೆ ರಾಜ್ಯ ತಂಡದ ಜೆ. ಸುಚಿತ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್, ಬಿಆರ್ ಶರತ್ ಜತೆಗೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿರುವ ಮನ್ವಂತ್ ಕುಮಾರ್, ಎಲ್ಆರ್ ಚೇತನ್, ಕೆಎಲ್ ಶ್ರೀಜಿತ್, ಎಂ. ವೆಂಕಟೇಶ್, ಮೋನಿಶ್ ರೆಡ್ಡಿ, ಅಭಿಲಾಷ್ ಶೆಟ್ಟಿ ಹರಾಜಿನಲ್ಲಿದ್ದಾರೆ.
ಉಳಿದಂತೆ ಸದ್ಯ ರಾಜ್ಯದ 10 ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ರಿಟೇನ್ ಆಗಿದ್ದಾರೆ. ಅವರೆಂದರೆ ಕೆಎಲ್ ರಾಹುಲ್, ಕೆ. ಗೌತಮ್ (ಲಖನೌ), ದೇವದತ್ ಪಡಿಕಲ್ (ರಾಜಸ್ಥಾನದಿಂದ ಲಖನೌಗೆ ವರ್ಗಾವಣೆ), ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್), ಪ್ರಸಿದ್ಧಕೃಷ್ಣ (ರಾಜಸ್ಥಾನ), ಪ್ರವಿಣ್ ದುಬೆ (ಡೆಲ್ಲಿ), ಅಭಿನವ್ ಮನೋಹರ್ (ಗುಜರಾತ್), ವಿದ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್), ವೈಶಾಕ್ ವಿಜಯ್ಕುಮಾರ್, ಮನೋಜ್ ಭಾಂಡಗೆ (ಆರ್ಸಿಬಿ).