ಆ್ಯಪಲ್ ಕಂಪನಿಯ ಹೊಸ ಸೀರಿಸ್ iPhone16 ಬಿಡುಗಡೆಯಾಗಿದೆ. ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಟಿಮ್ ಕುಕ್ ಐಫೋನ್ 16 ಸೀರೀಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಹೌದು ಭಾರತದಲ್ಲಿ ಸೆ.13 ಸಂಜೆ 5:30ರಿಂದ ಐಫೋನ್ ಪ್ರಿ ಆರ್ಡರ್ ಆರಂಭವಾಗಲಿದ್ದು ಸೆ.20 ರಿಂದ ಮಾರಾಟ ಶುರುವಾಗಲಿದೆ.
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಐಫೋನ್ 16 ಮತ್ತು ಐಫೋನ್ 16 ಪ್ಲಸ್ 128 GB, 256GB, 512GB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಐಫೋನ್ 16 ಪ್ರೋ 128GB, 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ ಐಫೋನ್ 16 ಪ್ರೋ ಮ್ಯಾಕ್ಸ್ 256GB, 512GB, 1TB ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ.
128 ಜಿಬಿ ಫೋನಿಗೆ ದರ ಎಷ್ಟು?
ಭಾರತ
ಐಫೋನ್ 16 – 79,900 ರೂ.
ಐಫೋನ್ 16 ಪ್ಲಸ್ – 89,900 ರೂ.
ಐಫೋನ್ 16 ಪ್ರೋ – 1,19,900 ರೂ.
ಐಫೋನ್ 16 ಪ್ರೋ ಮ್ಯಾಕ್ಸ್ -1,44,900 ರೂ. (256 ಜಿಬಿ ಸ್ಟೋರೇಜ್)
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ವಿನ್ಯಾಸ
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್ಗಳು ಅತ್ಯಂತ ಶಕ್ತಿಯುತವಾದ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಇವುಗಳ ಹಿಂಭಾಗದ ಬಣ್ಣವು ತುಂಬಾ ವಿಶೇಷವಾಗಿದೆ. ಈ ಫೋನ್ಗಳನ್ನು ಅಲ್ಟ್ರಾಮರೀನ್, ಟೀಲ್, ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಕ್ಯಾಮರಾ :
ಐಫೋನ್ 16 ಅತ್ಯುತ್ತಮ 48MP ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮರಾ 48MP ಮತ್ತು 12MP ಫೋಟೋಗಳನ್ನು ಸಂಯೋಜಿಸುವ ಮೂಲಕ 24MP ಫೋಟೋವನ್ನು ರಚಿಸುತ್ತದೆ. ಐಫೋನ್ 16 ನಲ್ಲಿ ಲಭ್ಯವಿರುವ ಹೊಸ ವೈಶಿಷ್ಟ್ಯವೆಂದರೆ ಇದರಲ್ಲಿ ಕ್ಯಾಮೆರಾದ ಸೆಟ್ಟಿಂಗ್ಗಳನ್ನು ಸುಲಭವಾಗಿ ಬದಲಾಯಿಸಬಹುದು. Phone 16 ನೊಂದಿಗೆ ನೀವು 4K60 ವೀಡಿಯೊವನ್ನು ಶೂಟ್ ಮಾಡಬಹುದು, ಅದು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದರ ಅಲ್ಟ್ರಾ-ವೈಡ್ ಕ್ಯಾಮೆರಾ ಕೂಡ ತುಂಬಾ ಚೆನ್ನಾಗಿದೆ ಎಂದು ಕಂಪನಿ ತಿಳಿಸಿದೆ.
ಹೊಸ ಚಿಪ್ಸೆಟ್:
ಐಫೋನ್ 16 ಪ್ರೋ ಮತ್ತು iPhone 16 ಪ್ರೋ ಮ್ಯಾಕ್ಸ್ ಫೋನ್ಗಳಲ್ಲಿ A18 Pro ಚಿಪ್ ಅನ್ನು ಅಳವಡಿಸಲಾಗಿದೆ. ಇದು 6 ಕೋರ್ಗಳನ್ನು ಹೊಂದಿದ್ದು ಐಫೋನ್ 15 ಪ್ರೊ ಚಿಪ್ಗಿಂತ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್ನಲ್ಲಿ ProRes ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಬಹುದಾಗಿದ್ದು, USB 3 ಸಹಾಯದಿಂದ ಅತ್ಯಂತ ವೇಗವಾಗಿ ಡೇಟಾವನ್ನು ವರ್ಗಾಯಿಸಬಹುದು ಎಂದು ತಿಳಿದುಬಂದಿದೆ.
ಅಮೆರಿಕ
ಐಫೋನ್ 16 – 799 ಡಾಲರ್(67,090 ರೂ.)
ಐಫೋನ್ 16 ಪ್ಲಸ್ – 899 ಡಾಲರ್
ಐಫೋನ್ 16 ಪ್ರೋ – 999 ಡಾಲರ್
ಐಫೋನ್ 16 ಪ್ರೋ ಮ್ಯಾಕ್ಸ್ – 1,199 ಡಾಲರ್ (256 ಜಿಬಿ ಸ್ಟೋರೇಜ್)
ಯುಎಇ
ಐಫೋನ್ 16 – 3,399 ದಿರ್ಹಮ್(77,705 ರೂ)
ಐಫೋನ್ 16 ಪ್ಲಸ್ – 3,799 ದಿರ್ಹಮ್
ಐಫೋನ್ 16 ಪ್ರೋ – 4,299 ದಿರ್ಹಮ್
ಐಫೋನ್ 16 ಪ್ರೋ ಮ್ಯಾಕ್ಸ್ – 5,099 ದಿರ್ಹಮ್ (256 ಜಿಬಿ ಸ್ಟೋರೇಜ್)
ಚೀನಾ
ಐಫೋನ್ 16 – 5,999 ಯುವಾನ್ (70,703 ರೂ.)
ಐಫೋನ್ 16 ಪ್ಲಸ್ – 6,999 ಯುವಾನ್
ಐಫೋನ್ 16 ಪ್ರೋ – 7,99 ಯುವಾನ್
ಐಫೋನ್ 16 ಪ್ರೋ ಮ್ಯಾಕ್ಸ್ – 9,999 ಯುವಾನ್ (256 ಜಿಬಿ ಸ್ಟೋರೇಜ್)
ಭಾರತದಲ್ಲಿ ಐಫೋನ್ ಬೆಲೆ ಜಾಸ್ತಿ ಯಾಕೆ?
ಭಾರತದಲ್ಲಿ ಐಫೋನ್ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಭರಿಸಲು ಕಂಪನಿಗಳು ದರವನ್ನು ಏರಿಕೆ ಮಾಡಿವೆ.
ಫೋನ್ಗಳ ಮೇಲೆ ಶೇ.18 ಜಿಎಸ್ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ. ಅಮೆರಿಕ ಮತ್ತು ಯುಎಇಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.