ಬೆಳಗಾವಿ:- ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವ ಕೆಲಸ ಮಾಡ್ತಾರೆ ಎಂದು ಹೇಳುವ ಮೂಲಕ BSY ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿಂದು ಉಭಯ ನಾಯಕರ ಚರ್ಚೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿಎಸ್ವೈ ವಿರುದ್ಧ ಮತ್ತೆ ಹರಿಹಾಯ್ಡರು.
ಹುಬ್ಬಳ್ಳಿ-ಧಾರವಾಡದಲ್ಲಿ ಲೈಟ್ ಟ್ರಾಮ್ ಸಾರಿಗೆ ಯೋಜನೆ ತರುವತ್ತ ಸಚಿವ ಸಂತೋಷ್ ಲಾಡ್ ಚಿತ್ತ!
ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕುವುದು ಅಲ್ಲ. ಇದರ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರ ಕುತಂತ್ರ ಇದ್ದೇ ಇರುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನಿಸಿದ್ದರು, ನಾನು ಹೋಗಿಲ್ಲ, ರಮೇಶ್ ಜಾರಕಿಹೊಳಿ ಸಹ ಹೋಗಲ್ಲ. ಇಲ್ಲಿ ಕರೆಯುತ್ತಾರೆ, ಆದ್ರೆ ದಾವಣಗೆರೆಯಲ್ಲಿ ಅವರ ಚೇಲಾಗಳನ್ನು ಬಿಟ್ಟು ಯಡಿಯೂರಪ್ಪ, ವಿಜಯೇಂದ್ರ ನಿರಂತರವಾಗಿ ಅಲ್ಲಿನ ಸಭೆಗಳನ್ನ ಮಾನಿಟರ್ ಮಾಡುತ್ತಿದ್ದಾರೆ. ಅವರ ಗನ್ ಮ್ಯಾನ್ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವುದು ಅಲ್ಲ. ನಾವು ಉತ್ತರ ಕರ್ನಾಟಕದವರು ಆ ರೀತಿ ಮಾಡಲ್ಲ. ಏನಿದ್ದರೂ ಏಕ್ ಮಾರ್ ದೋ ತುಕ್ಡಾ, ಎದುರಿಗೇ ಮಾತನಾಡ್ತೀವಿ ಎಂದು ಹೇಳಿದರು