ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಇನ್ವೆಸ್ಟ್ ಕರ್ನಾಟಕ- 2025 ಹೂಡಿಕೆದಾರರ ಸಮಾವೇಶಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಹೆಚ್ಚು ಬಂಡವಾಳ ಹೂಡಿಕೆಯ ನಿರೀಕ್ಷೆಯಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿ ಜಯ ಸಿಕ್ಕಿದೆ. ವಸ್ತು ಪ್ರದರ್ಶನದಲ್ಲಿನ ತಂತ್ರಜ್ಞಾನ, ಒಂಡಬಡಿಕೆ, ಗೋಷ್ಠಿ, ಸಂವಾದ ಕಾರ್ಯಕ್ರಮಗಳೂ ಕಳೆದ ಬಾರಿಯ ಇನ್ವೆಸ್ಟ್ ಕರ್ನಾಟಕದ ರೆಕಾರ್ಡ್ ಬ್ರೇಕ್ ಮಾಡಿವೆ….
ಗುಡ್ ನ್ಯೂಸ್: 4500 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಹರು ಇಂದೇ ಅಪ್ಲೈ ಮಾಡಿ!
ಇನ್ವೆಸ್ಟ್ ಕರ್ನಾಟಕ ಸಮ್ಮಿಟ್ ಗೆ ಮುನ್ನುಡಿ ಬರೆದಿದ್ದೇ ಕರ್ನಾಟಕ, ಇದೀಗ ಅನ್ಯ ರಾಜ್ಯಗಳು ಕರ್ನಾಟಕದ ಇನ್ವೆಸ್ಟ್ ಮೀಟ್ ಅನುಸರಿಸುತ್ತಿದೆ. ಅದರಲ್ಲೂ ಈ ಬಾರಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ನವೋದ್ಯಮಿ, ಉದ್ಯಮಿಗಳಿಗೆ, ಹೂಡಿಕೆದಾರರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. 3 ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಇಂದು ಅದ್ಧೂರಿ ತೆರೆ ಬಿದ್ದಿದೆ. ಇಂದು ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಶಿಶಿ ತರೂರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವರು ಹಾಗೂ ಹಲವು ದೇಶಗಳ ನೂರಾರು ಉದ್ಯಮಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇನ್ನೂ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 19 ದೇಶಗಳು ಭಾಗಿಯಾಗಿದ್ದು, ಹಲವು ಸಂವಾದ, ಗೋಷ್ಠಿಗಳು ಇನ್ವೆಸ್ಟ್ ಕರ್ನಾಟಕಕ್ಕೆ ಸಾಕ್ಷಿಯಾಗಿತ್ತು. ಈ ಬಾರಿ ನಿರೀಕ್ಷೆಗೂ ಮೀರಿ ರಾಜ್ಯಕ್ಕೆ ಬೃಹತ್ ಬಂಡವಾಳ ಹರಿದು ಬಂದಿದೆ. 3 ದಿನಗಳಲ್ಲಿ ಬರೋಬ್ಬರಿ ಒಟ್ಟು 10,27,378 ರೂ. ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಮುಂದಿನ ದಿನಗಳಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ. ವಲಯವಾರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಆಗಿದೆ. ಎಂದಿನಂತೆ ಈ ಬಾರಿಯೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯಾಗಿದೆ. ಈ ವಲಯದಲ್ಲಿ ಶೇ. 41 ರಷ್ಟು ಹೂಡಿಕೆ ಆಗಿದೆ. ಹಾಗಾದ್ರೆ ಯಾವ ಯಾವ ವಲಯಕ್ಕೆ ಎಷ್ಟು ಹೂಡಿಕೆಯಾಗಿದೆ ಎಂಬ ಅಂಕಿ ಅಂಶ ನೋಡೋದಾದ್ರೆ
ಇನ್ವೆಸ್ಟ್ ಕರ್ನಾಟಕದಲ್ಲಿ ವಲಯವಾರು ಹೂಡಿಕೆ ಎಷ್ಟು,
ಎಷ್ಟು ಒಪ್ಪಂದಕ್ಕೆ ಸಹಿ ಆಗಿದೆ…
ವಲಯ – 1
* ಉತ್ಪಾದನಾ ಮತ್ತು ಉದಯೋನ್ಮುಖ ಕ್ಷೇತ್ರ ( ಆಟೋ-ಇವಿ, ಆರ್ ಆಂಡ್ ಡಿ)
* ಹೂಡಿಕೆ ಘೋಷಣೆ – 75,274 ಕೋಟಿ
* ಒಪ್ಪಂದಕ್ಕೆ ಸಹಿ – 63,719 ಕೋಟಿ
* ಒಟ್ಟು ಹೂಡಿಕೆ – 1,38,993 ಕೋಟಿ
* ಪ್ರಮಾಣ- 14%
ವಲಯ 2
* ಸಾಮಾನ್ಯ ಉತ್ಪಾದನಾ ವಲಯ ( ಕೃಷಿ ಮತ್ತು ಆಹಾರ ಉತ್ಪನ್ನ, ಟೆಕ್ಸ್ಟೈಲ್, ಫಾರ್ಮಾ, ಯಂತ್ರೋಪಕರಣದ ಬಿಡಿಭಾಗ)
* ಹೂಡಿಕೆ ಘೋಷಣೆ – 52,400
* ಒಪ್ಪಂದಕ್ಕೆ ಸಹಿ – 52,619
* ಒಟ್ಟು ಹೂಡಿಕೆ – 1,05,019
* ಪ್ರಮಾಣ- 10%
ವಲಯ 3
* ಪ್ರಮುಖ ಉತ್ಪಾದನಾ ಕ್ಷೇತ್ರ ( ಸ್ಟೀಲ್, ಸಿಮೆಂಟ್)
* ಹೂಡಿಕೆ ಘೋಷಣೆ- 16, 143
* ಒಪ್ಪಂದಕ್ಕೆ ಸಹಿ – 1,43,700 ಕೋಟಿ
* ಒಟ್ಟು – 1,59,843 ಕೋಟಿ
* ಪ್ರಮಾಣ – 15%
ವಲಯ 4
* ನವೀಕರಿಸಬಹುದಾದ ಇಂಧನ ಕ್ಷೇತ್ರ
* ಹೂಡಿಕೆ ಘೋಷಣೆ – 81,356
* ಒಪ್ಪಂದಕ್ಕೆ ಸಹಿ- 3,44,425 ಕೋಟಿ
* ಒಟ್ಟು – 4,25,781
* ಪ್ರಮಾಣ- 41%
ವಲಯ 5
* ಮೂಲಸೌಕರ್ಯ ಹಾಗೂ ಕೈಗಾರಿಕಾ ಲಾಜೆಸ್ಟಿಕ್ ( ನಗರ ಗ್ಯಾಸ್ ಸರಬರಾಜು, ಟೆಲಿಕಾಂ, ಏರ್ ಪೋರ್ಟ್, ಡೇಟಾ ಸೆಂಟರ್)
* ಹೂಡಿಕೆ ಘೋಷಣೆ – 88,492
* ಒಪ್ಪಂದಕ್ಕೆ ಸಹಿ – 19,382
* ಒಟ್ಟು – 1,07,874 ಕೋಟಿ
* ಪ್ರಮಾಣ – 11%
ವಲಯ 6
* ಸ್ಟಾಟಪ್ ಬಂಡವಾಳ
* ಹೂಡಿಕೆ ಘೋಷಣೆ- 89,868
* ಒಟ್ಟು – 89,868
* ಪ್ರಮಾಣ – 9%
ಇನ್ನೂ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕರ್ನಾಟಕ ರಾಜ್ಯದ ಇತಿಹಾಸ ದೇಶಕ್ಕೆ ಒಂದು ಮಾದರಿ. 2000 ಇಸವಿಯಲ್ಲಿ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೀತು. ಕೆಲವು ಸಕ್ಸಸ್, ಮತ್ತೆ ಕೆಲಸ ಫೇಲ್ಯುಯರ್ ಆಗಿವೆ. ಇಡೀ ಪ್ರಪಂಚದ ಹೂಡಿಮೆದಾರರ ಕಂಪನಿಗಳು ಇಲ್ಲಿ ಭಾಗಿಯಾಗಿದ್ದರು. ಇಲ್ಲಿನ ಪರಿಸರ, ಪ್ರತಿಭೆ, ಶಿಕ್ಷಣ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ. 10 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ, 6.3 MOVಗೆ ಸಹಿ ಮಾಡಿದ್ದಾರೆ. ಹೊಸ ಕೈಗಾರಿಕಾ ನೀತಿ ತಂದಿದ್ದೇವೆ ಅಂತ ಸಂತಸ ಹಂಚಿಕೊಂಡಿದ್ದಾರೆ.
ಒಟ್ಟಾರೆ, ಮೂರು ದಿನಗಳ ಕಾಲ ನಡೆದ ಇನ್ವೆಸ್ಟ್ ಕರ್ನಾಟಕ-2025 ಸಮ್ಮಿಟ್ ಗೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ಬಾರೀ ನಿರೀಕ್ಷೆಗೂ ಮೀರಿ ಹೆಚ್ಚು ಹೂಡಿಕೆಯಾಗಿದೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ 45% ಬಂಡವಾಳ ಹೂಡಿಕೆಗೆ ಪ್ರಾತಿನಿಧ್ಯ ಕೊಡಲಾಗಿದ್ದು, ಬೆಂಗಳೂರಿಗೆ ಆಗ್ತಿದ್ದ ಹೊರೆ ತಗ್ಗಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ….