ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅನಿವಾರ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ಪ್ರತಿ ದಿನ 50 ರೂ. ಅಂದರೆ ತಿಂಗಳಿಗೆ 1,500 ರೂ. ಆಯಿತು. ಇದನ್ನು ಮ್ಯೂಚುವಲ್ ಫಂಡ್ನಲ್ಲಿ ವ್ಯವಸ್ಥಿತ ಹೂಡಿಕೆ ವಿಧಾನ ಅಥವಾ ಎಸ್ಐಪಿ ಮೂಲಕ ಹೂಡಿಕೆ ಮಾಡುತ್ತಾ ಬಂದರೆ ಹೆಚ್ಚಿನ ಲಾಭ ಪಡೆಯಬಹುದು.
ಉದಾಹರಣೆಗೆ; ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ನ ಲೆಕ್ಕಾಚಾರ ಗಮನಿಸಬಹುದು. ಈ ಸ್ಮಾಲ್ಕ್ಯಾಪ್ ಫಂಡ್ ಈವರೆಗೆ ಹೂಡಿಕೆದಾರರಿಗೆ ಎಷ್ಟು ರಿಟರ್ನ್ಸ್ ತಂದುಕೊಟ್ಟಿದೆ? ಈಗ ಹೂಡಿಕೆ ಮಾಡಿದರೆ ಎಷ್ಟು ಗಳಿಸಬಹುದಾದ ಸಾಧ್ಯತೆ ಇದೆ ಎಂಬ ವಿವರ ಇಲ್ಲಿದೆ.
ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ 1996ರ ಅಕ್ಟೋಬರ್ 29ರಂದು ಸ್ಥಾಪನೆಯಾಗಿದೆ. ಅಂದಿನಿಂದ ಈವರೆಗೆ ಶೇ 11.47ರ ರಿಟರ್ನ್ಸ್ ತಂದುಕೊಟ್ಟಿರುವುದಾಗಿ ಎಎಂಎಫ್ಐ ವೆಬ್ಸೈಟ್ನಲ್ಲಿರುವ ಈವರೆಗಿನ ದತ್ತಾಂಶಗಳಿಂದ ತಿಳಿದುಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಫಂಡ್ ರೆಗ್ಯುಲರ್ ಪ್ಲಾನ್ನಡಿಯಲ್ಲಿ ಶೇ 47.25 ಹಾಗೂ ಡೈರೆಕ್ಟ್ ಪ್ಲಾನ್ ಅಡಿಯಲ್ಲಿ ಶೇ 49.35ರ ರಿಟರ್ನ್ಸ್ ತಂದುಕೊಟ್ಟಿದೆ.
ಆನ್ಲೈನ್ ಮ್ಯೂಚುವಲ್ ಫಂಡ್ ಎಸ್ಐಪಿ ಕ್ಯಾಲ್ಕುಲೇಟರ್ಗಳು ತೋರಿಸಿರುವ ಲೆಕ್ಕಾಚಾರದ ಪ್ರಕಾರ, 1996ರಿಂದ ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ನಲ್ಲಿ ತಿಂಗಳಿಗೆ 1,500 ರೂ.ನಂತೆ ಹೂಡಿಕೆ ಮಾಡಿದ್ದರೆ ಈಗ 30 ಲಕ್ಷ ರೂ. ರಿಟರ್ನ್ಸ್ ದೊರೆಯುತ್ತಿತ್ತು. ಕಳೆದ ಮೂರು ವರ್ಷಗಳಿಂದ ತಿಂಗಳಿಗೆ 1,500 ರೂ.ನಂತೆ ಹೂಡಿಕೆ ಮಾಡಿದ್ದರೆ ಈಗ ಅದು 1.2 ಲಕ್ಷ ರೂ. ಆಗುತ್ತಿತ್ತು.
ದೀರ್ಘಾವಧಿಯ ಹೂಡಿಕೆಗೆ ಉತ್ತಮ
ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ ದೀರ್ಘಾವಧಿಯ ಹೂಡಿಕೆಗೆ ಬೆಸ್ಟ್ ಎನ್ನುತ್ತಾರೆ ಹೂಡಿಕೆ ತತ್ಞರು. ಸ್ಮಾಲ್ಕ್ಯಾಪ್ ಫಂಡ್ಗಳು ಸಾಮಾನ್ಯವಾಗಿ ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ಗಳಿಸಿಕೊಡುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಅತಿಹೆಚ್ಚಿನ ರಿಟರ್ನ್ಸ್ ಅನ್ನೂ ಗಳಿಸಿಕೊಟ್ಟಿವೆ.
ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ ಎಲ್ಲೆಲ್ಲಿ ಹೂಡಿಕೆ ಮಾಡಿದೆ?
ಕ್ವಾಂಟ್ ಸ್ಮಾಲ್ಕ್ಯಾಪ್ ಫಂಡ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ 12.45ರಷ್ಟು ಹೂಡಿಕೆ ಮಾಡಿದೆ. ಎಫ್ಎಂಸಿಜಿಯಲ್ಲಿ ಶೇ 9.39, ನಿರ್ಮಾಣ ಚಟುವಟಿಕೆಯಲ್ಲಿ ಶೇ 6.74, ಲೋಹ ಉದ್ದಿಮೆಯಲ್ಲಿ ಶೇ 5.74, ಔಷಧ ಕ್ಷೇತ್ರದಲ್ಲಿ ಶೇ 5.2 ಹಾಗೂ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.