ಬೆಂಗಳೂರು: ಒಂದು ದೇಶ ಒಂದು ಚುನಾವಣೆ ಜಾರಿಗೆ ತರುವ ಬದಲಾಗಿ, ದೇಶದಾದ್ಯಂತ ಉಚಿತ ಶಿಕ್ಷಣ ಜಾರಿಗೆ ತರಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕರೆ ನೀಡಿದ್ದಾರೆ. ದೇಶದಲ್ಲಿ ಉನ್ನತ ಶಿಕ್ಷಣ ಎಂಬುದು ಬಡವರ ಮಕ್ಕಳಿಗೆ ಗಗನಕುಸುಮವಾಗಿದೆ. ಎಲ್ಲೆಡೆ ಭಾರಿ ಪ್ರಮಾಣದ ಶುಲ್ಕ ಪಾವತಿಸಲಾಗದೇ ಎಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ.
ಶನಿವಾರ ಈ ಕೆಲಸಗಳಲ್ಲಿ 1 ಕೆಲಸ ಮಾಡಿದರೂ ನಿಮ್ಮ ಖಜಾನೆ ತುಂಬುತ್ತದೆ..!
ಪ್ರಧಾನಿಗಳು ಅನಗತ್ಯವಾಗಿ ಒಂದು ದೇಶ ಒಂದು ಚುನಾವಣೆ ಜಾರಿಗೆ ಬಗ್ಗೆ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಇಂತಹ ಪ್ರಚಾರದ ಹುಚ್ಚಿನಿಂದ ಹೊರಬಂದು ದೇಶದಲ್ಲಿ ಉಚಿತ ಶಿಕ್ಷಣ ಘೋಷಿಸಲಿ ಎಂದು ಸಚಿವ ಲಾಡ್ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಸಚಿವ ಲಾಡ್ ನೀಡಿದ ಈ ಸಲಹೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಲಾಡ್ ಸಲಹೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.