ವಿಜಯನಗರ:- ತುಂಗಭದ್ರಾ ಡ್ಯಾಂ ಗೇಟ್ ಅಳವಡಿಕೆ ಯಶಸ್ವಿ ಆಗಿರುವ ಹಿನ್ನೆಲೆ, ಜೀವ ಪಣಕ್ಕಿಟ್ಟು ಶ್ರಮಿಸಿದ ಕಾರ್ಮಿಕರಿಗೆ ಅಭಿನಂದನಾ ಸನ್ಮಾನ ಜರುಗಿದೆ.
ಪ್ರಾಸಿಕ್ಯೂಷನ್ ಅನುಮತಿ: ಜೋರಾಯ್ತು ಪ್ರತಿಭಟನೆ ಕಾವು, ಬೆಂಗಳೂರಿನಲ್ಲಿ ಪೊಲೀಸ್ ಕಟ್ಟೆಚ್ಚರ!
ಕಂಪ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು. ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಕೊಟ್ಟ ಮಾತಿನಂತೆ ನಾರಾಯಣ ಇಂಜಿನೀಯರ್ಸ್, ಹಿಂದೂಸ್ತಾನ್ ಸ್ಟೀಲ್ ವರ್ಕ್ಸ್ ಹಾಗೂ ಜಿಂದಾಲ್ ನ ಕಂಪನಿ ಸೇರಿದಂತೆ ಡ್ಯಾಂ ಅಳವಡಿಕೆಗೆ ಶ್ರಮಿಸಿದ ಪ್ರತಿ ಕಾರ್ಮಿಕರಿಗೂ ಸನ್ಮಾನದ ಜೊತೆಗೆ 50 ಸಾವಿರ ಹಣವನ್ನ ಕವರ್ನಲ್ಲಿ ಹಾಕಿ ಬಹುಮಾನ ವಿತರಿಸಲಾಯಿತು.
ಜಮೀರ್ ಸೂಚನೆ ಮೇರೆಗೆ ಶಾಸಕ ಜೆ.ಎನ್ ಗಣೇಶ್ ಅವರು ಕಾರ್ಮಿಕರಿಗೆ ಹಣದ ರೂಪದಲ್ಲಿ ಬಹುಮಾನ ನೀಡಿದರು. ಕಾರ್ಮಿಕರಿಗೆ ಬಹುಮಾನ ನೀಡುವುದ ಮೂಲಕ ಕೊಟ್ಟ ಮಾತು ಸಚಿವ ಜಮೀರ್ ಅಹ್ಮದ್ ಉಳಿಸಿಕೊಂಡಿದ್ದಾರೆ.