IPL ಮೆಗಾ ಹರಾಜಿನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಬಿಮಾನಿಗಳ ಲೆಕ್ಕಾಚಾರ ತಲೆ ಕೆಡುವಂತೆ ಮಾಡಿದೆ. ಇಂತವರನ್ನೇ ಖರೀದಿಸುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದೆ.
ಮುಂದಿನ ಸೀಸನ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ.
ಇದಕ್ಕೂ ಮುನ್ನ ಆರ್ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್ ದಯಾಳ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್ ನೀಡಲಾಗಿದೆ.
ಐಪಿಎಲ್ ಮೆಗಾ ಹರಾಜು ಮುಗಿದಿದೆ. ಆರ್ಸಿಬಿ ಮ್ಯಾನೇಜ್ಮೆಂಟ್ ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ. ಸಿರಾಜ್, ಮ್ಯಾಕ್ಸ್ವೆಲ್, ವಿಲ್ ಜಾಕ್ಸ್, ಫಾಫ್ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಡ್ ಮಾಡೋ ಗೋಜಿಗೆ ಹೋಗಲಿಲ್ಲ ಆರ್ಸಿಬಿ. ಆದರೆ ಹಾರ್ದಿಕ್ ಪಾಂಡ್ಯ ಬ್ರದರ್ ಕೃನಾಲ್ ಪಾಂಡ್ಯಗೆ ಗಾಳ ಹಾಕಿದೆ.
ಕೃನಾಲ್ ಪಾಂಡ್ಯ ಬೇಸ್ ಪ್ರೈಸ್ 2 ಕೋಟಿ. ಮೊದಲಿಗೆ ಕೃನಾಲ್ ಪಾಂಡ್ಯಗೆ ಯಾರು ಬಿಡ್ ಮಾಡಲಿಲ್ಲ. ಕೊನೆಗೆ ಆರ್ಸಿಬಿ ಬಿಡ್ ಮಾಡಿತು. ಬಳಿಕ ರಾಜಸ್ಥಾನ್, ಆರ್ಸಿಬಿ ಮಧ್ಯೆ ಪೈಪೋಟಿ ನಡೆಯಿತು. ಕೊನೆಗೆ ಕೃನಾಲ್ 5.75 ಕೋಟಿಗೆ ಆರ್ಸಿಬಿ ತಂಡದ ಪಾಲಾದ್ರು. ಕೆ.ಎಲ್ ರಾಹುಲ್ ಅವರನ್ನು ಬಿಡ್ ಮಾಡದ ಆರ್ಸಿಬಿಯಿಂದ ಮತ್ತೊಬ್ಬ ಕನ್ನಡಿಗನಿಗೂ ಅನ್ಯಾಯ ಆಗಿದೆ ಅನ್ನೋ ಆಕ್ರೋಶ ವ್ಯಕ್ತವಾಗಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೃನಾಲ್ ಬದಲು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿ ಮಾಡಬಹುದಿತ್ತು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಮಯಾಂಕ್ ಅಗರ್ವಾಲ್ ಅನ್ಸ್ಟೋಲ್ಡ್ ಆಗಿದ್ದಾರೆ.