ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸ್ನಾತಕ ಕೋರ್ಸ್ಗಳ ಪ್ರವೇಶ ಕೌನ್ಸ್ಲಿಂಗ್ನಲ್ಲಿ ತಮಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಸ್ನಾತಕ ಕೋರ್ಸ್ಗಳಿಗೆ ವಿಳಂಬವಾಗಿ ಕೌನ್ಸ್ಲಿಂಗ್ ಆರಂಭಿಸಿದೆ. ಇಲ್ಲಿ ಕೌನ್ಸ್ಲಿಂಗ್ ವಿಳಂಬವಾಗಿ ಆರಂಭವಾಗಿದ್ದರಿಂದ ಇದಕ್ಕಿಂತ ಮುಂಚೆಯೇ ಕೆಲ ವಿದ್ಯಾರ್ಥಿಗಳು ಬೇರೆ ಬೇರೆ ಕಡೆ ಪ್ರವೇಶ ಪಡೆದಿದ್ದರು.
ಇಂದು ಕೃಷಿ ವಿವಿ ಕೌನ್ಸ್ಲಿಂಗ್ ಕರೆದಿದ್ದು, ಇಲ್ಲಿ ಕೌನ್ಸ್ಲಿಂಗ್ಗೆ ಬರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ತರಬೇಕು ಎಂದು ಈಗ ಹೇಳುತ್ತಿದೆ. ಆದರೆ, ಇದಕ್ಕೂ ಮುಂಚೆ ಬೇರೆ ಕಡೆ ಕೌನ್ಸ್ಲಿಂಗ್ ಹಾಜರಾಗಿ ಅಲ್ಲಿ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಗಳನ್ನು ಸಲ್ಲಿಸಿದ್ದಾರೆ.
South Korea: ನಾಯಿ ಮಾಂಸ ಸೇವನೆಗೆ ರದ್ದು : ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ!
ಸದ್ಯ ಇಲ್ಲಿ ಕೌನ್ಸ್ಲಿಂಗ್ಗೆ ಹಾಜರಾಗಿರುವ ವಿದ್ಯಾರ್ಥಿಗಳು ದೃಢೀಕೃತ ಅಂಕಪಟ್ಟಿಯೊಂದಿಗೆ ಕೌನ್ಸ್ಲಿಂಗ್ಗೆ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಆದರೆ, ಮೂಲ ಅಂಕಪಟ್ಟಿ ಇಲ್ಲದವರಿಗೆ ಕೌನ್ಸ್ಲಿಂಗ್ಗೆ ಹಾಜರಾಗಲು ಅವಕಾಶ ಸಿಕ್ಕಿಲ್ಲ. ಸಂಬಂಧಿತ ಕಾಲೇಜಿನಿಂದಲೂ ಪ್ರಮಾಣ ಪತ್ರ ತಂದರೂ ಕೃಷಿ ವಿವಿ ಪರಿಗಣಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಬೀದರ್, ಬೆಂಗಳೂರು, ಕಲಬುರ್ಗಿ, ವಿಜಯಪುರ ಸೇರಿದಂತೆ ಹಲವು ಕಡೆಗಳಿಂದ ವಿದ್ಯಾರ್ಥಿಗಳು ಕೌನ್ಸ್ಲಿಂಗ್ಗೆ ಬಂದಿದ್ದರು. ಇವತ್ತು ಒಂದು ದಿನ ಅವಕಾಶ ಕೊಟ್ಟರೆ ನಾಳೆ ಮೂಲ ಅಂಕಪಟ್ಟಿ ತಂದು ಕೊಡುತ್ತೇವೆ ಎಂದು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದರೂ ಕೃಷಿ ವಿವಿ ಆಡಳಿತ ಮಂಡಳಿ ಮಾತ್ರ ಅದಕ್ಕೆ ಒಪ್ಪಿಗೆ ಕೊಡುತ್ತಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಅದು ಹೇಗೆ ಪಾರಾಗುತ್ತಾರೋ ಕಾದು ನೋಡಬೇಕಿದೆ.