ನೆಲಮಂಗಲ:– ಬೆಂಗಳೂರು ಉತ್ತರ ತಾಲೂಕಿ ಗುಣಿ ಅಗ್ರಹಾರ ಗ್ರಾಮದಲ್ಲಿ ಮನೆಯ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಕ್ರೈಸ್ತ ವೃದ್ಧೆಯೊಬ್ಬರು ಆಯಸಿಡ್ ಎರಚಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಜರುಗಿದೆ
ಆಯಸಿಡ್ ಎರಚಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳು ಗಾಯಗೊಂಡಿದ್ದು, ನೋವು ತಾಳಲಾರದೇ ರೋದಿಸುತ್ತಿವೆ.
ಗುಣಿ ಅಗ್ರಹಾರ ಗ್ರಾಮದ ನಿವಾಸಿ ಗ್ರೀಸ್ ಜೋಸೆಫ್ ಎಂಬ ಕ್ರೈಸ್ತ ವೃದ್ಧ ಮಹಿಳೆ ವಿರುದ್ಧ ಅಮಾನವೀಯ ಕೃತ್ಯ ಎಸಗಿದ ಆರೋಪ ಕೇಳಿಬಂದಿದೆ. ಆಯಸಿಡ್ ದಾಳಿಯಿಂದ ಗ್ರಾಮದ ಕೃಷ್ಣ, ನಾಗರಾಜು, ಹನುಮಂತ ರಾಜು ಮತ್ತು ಶ್ರೀರಾಮ್ ಎಂಬುವರ ಹಸುಗಳು ಗಾಯಗೊಂಡಿವೆ. ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯಗಳಾಗಿರುವುದರಿಂದ ನೋವು ತಾಳಲಾರದೇ ಮೂಕ ಪ್ರಾಣಿಗಳು ರೋದಿಸುತ್ತಿವೆ. ಮನೆ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಟೈಲ್ಸ್ ಕ್ಲೀನ್ ಮಾಡುವ ಆಯಸಿಡ್ ಅನ್ನು ವೃದ್ಧೆ ಎರಚಿದ್ದಾಳೆ