ಹಾವೇರಿ: ರಾಜ್ಯದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತಿದವರ ಮೇಲೆ ಕೇಸ್ ಹಾಕಿದ್ದಾರೆ. ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಉಳಿಯುತ್ತಿಲ್ಲ, ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ. ಇದು ದಬ್ಬಾಳಿಕೆಯ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಶಿಗ್ಗಾಂವಿಯ ತಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸ್ಗಳೇ ಇಲ್ಲದ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿದ್ದರು. ಇದೆಲ್ಲಾ ಯಾರ ಆದೇಶದ ಮೇಲೆ ನಡೆದಿದೆ? ರಾಜಕೀಯ ದ್ವೇಷಕ್ಕೆ ಪೊಲೀಸ್ (Police) ಇಲಾಖೆ ಬಳಕೆ ಮಾಡಿಕೊಂಡಿದ್ದಾರೆ. ಭಯ, ಅಶಾಂತಿ ಸೃಷ್ಟಿ ಮಾಡಿದ್ದಾರೆ. ಸಾಮರಸ್ಯ ಇರುವ ರಾಜ್ಯದಲ್ಲಿ ವೋಟಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.