ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಟಿ-20 ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ
ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅವರು 14 ತಿಂಗಳ ಬಳಿಕ ಟಿ-20 ಸರಣಿಗೆ ತಂಡಕ್ಕೆ ಮರಳಿದ್ದಾರೆ. ಆದರೆ, ಸದ್ಯ ವಿರಾಟ್ ಕೊಹ್ಲಿ ಗೈರು ಹಾಜರಿಗೆ ಕಾರಣ ತಿಳಿದುಬಂದಿಲ್ಲ. ಭಾರತ ತಂಡವು ಜನವರಿ 11ರಿಂದ (ನಾಳೆ) ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ.
ಅಫ್ಘಾನ್ ವಿರುದ್ಧ ಭಾರತ ಮೇಲುಗೈ
ಮೊದಲ ಪಂದ್ಯ ನಾಳೆ ಮೊಹಾಲಿಯಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಿ-20ಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ದಾಖಲೆಗಳನ್ನು ನೋಡಿದರೆ ಭಾರತ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳು ಈವರೆಗೆ 5 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 4 ಪಂದ್ಯ ಗೆದ್ದು 1 ಪಂದ್ಯ ಸೋತಿದೆ.
ಪಂದ್ಯ ಎಲ್ಲಿ? ಯಾವಾಗ?
- ಜನವರಿ 11 : ಮೊದಲ ಟಿ-20 : ಮೊಹಾಲಿ
- ಜನವರಿ 14 : ಎರಡನೇ ಟಿ-20 : ಇಂದೋರ್
- ಜನವರಿ 17 : ಮೂರನೇ ಟಿ-20 : ಬೆಂಗಳೂರು
- ಪಂದ್ಯ ಆರಂಭ : ಸಂಜೆ 7 ಗಂಟೆಗೆ
- ನೇರ ಪ್ರಸಾರ : ಜಿಯೋ ಸಿನಿಮಾ ಮತ್ತು ಸ್ಪೋಟ್ಸ್ 18