ಹುಬ್ಬಳ್ಳಿ:- ಆರ್ಥಿಕ ಪ್ರಗತಿಯಲ್ಲಿ ಭಾರತ ನಂಬರ್-1 ಸ್ಥಾನಕ್ಕೆರುವುದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಆರ್ಥಿಕ ಪ್ರಗತಿಯಲ್ಲಿ ಭಾರತ ವಿಶ್ವದ ಟಾಪ್ 3ನೇ ಸ್ಥಾನಕ್ಕೆ ಬರುವುದು ಸನ್ನಿಹಿತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ನಾವು ಟಾಪ್ 5ನೇ ಸ್ಥಾನದಲ್ಲಿದ್ದೇವೆ. ಹೊಸ ವರ್ಷದಲ್ಲಿ ಟಾಪ್ 3ನೇ ಸ್ಥಾನಕ್ಕೆ ಬರಲಿದ್ದೇವೆ. ಅದಾದ ನಂತರ ಹಂತ ಹಂತವಾಗಿ ವಿಶ್ವದಲ್ಲೇ ಭಾರತ ನಂಬರ್-1 ಸ್ಥಾನಕ್ಕೆರುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರ ಬಂಧನ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ಪ್ರತಾಪಸಿಂಹ ಜತೆ ನಾನು ಈ ಕುರಿತು ಮಾತನಾಡುವೆ. ಆದರೆ, ಇಷ್ಟು ದಿನ ಬಿಟ್ಟು ಈಗ ಏಕೆ ಬಂಧಿಸಿದ್ದಾರೆ? ಇದರ ಹಿನ್ನೆಲೆ ಏನು? ಎಂಬಂತಹ ಬಹಳಷ್ಟು ಪ್ರಶ್ನೆಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು. ಮೈಸೂರು ಲೋಕಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹೀಗೆ ಪ್ರತಾಪ ಸಿಂಹರನ್ನ ಟಾರ್ಗೆಟ್ ಮಾಡಲಾಗಿದೆಯಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಹಾಗೂ ಆಗಿರುವ ಸಾಧ್ಯತೆ ಇದೆ, ಈ ಕುರಿತು ನಾನು ಮಾಹಿತಿ ಪಡೆದು ಮಾತನಾಡುವೆ ಎಂದರು.