ನವದೆಹಲಿ: ಭಾರತದ ಜನಪ್ರಿಯ ಎರಡು ರೆಡಿಮೇಡ್ ಮಸಾಲೆ ಕಂಪನಿಗಳ ಪ್ರಾಡೆಕ್ಟ್ಗಳು ವಿದೇಶದಲ್ಲಿ ಬ್ಯಾನ್ ಆಗಿದೆ. ಹೌದು ಸಿಂಗಾಪುರ, ಹಾಂಗ್ ಕಾಂಗ್ ಸರ್ಕಾರ, MDH ಮತ್ತು ಎವರೆಸ್ಟ್ʼಗಳ ಸ್ಪೈಸಿ ಪ್ರಾಡಕ್ಟ್ಗಳನ್ನು ಬ್ಯಾನ್ ಮಾಡಿದೆ. ಹಾಂಗ್ ಕಾಂಗ್ನ ಫುಡ್ ಸೇಫ್ಟಿ ವಾಚ್ಡಾಗ್ ಬ್ಯಾನ್ ಮಾಡಿ ಆದೇಶ ನೀಡಿದೆ.
ಎಂಡಿಹೆಚ್ ಪ್ರಾಡೆಕ್ಟ್ನ ಮೂರು ಪೌಡರ್ಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಅಂಶಗಳು ಪತ್ತೆಯಾಗಿವೆ. ಮದ್ರಾಸ್ ಕರಿ ಪೌಡರ್, ಮಿಕ್ಸ್ಡ್ ಮಸಾಲಾ ಪೌಡರ್, ಸಾಂಬರ್ ಮಸಾಲ ದಲ್ಲಿ ಕ್ರಿಮಿನಾಶಕಕ್ಕೆ ಬಳಸುವ ಕೆಮಿಕಲ್ಸ್ ಪತ್ತೆಯಾಗಿದೆ. ಜೊತೆಗೆ ಎವರೆಸ್ಟ್ನ ಫಿಶ್ ಕರಿ ಮಸಾಲಾದಲ್ಲೂ Ethylene oxide ಅಂಶ
ಪತ್ತೆಯಾಗಿದೆ ಎಂದು ಆಹಾರ ಸಂಸ್ಕರಣಾ ಕೇಂದ್ರ ಏಪ್ರಿಲ್ ಐದರಂದು ಘೋಷಣೆ ಮಾಡಿತ್ತು. ಈ ಬಗ್ಗೆ ವೈಜ್ಞಾನಿಕ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ, ಹಾಂಗ್ ಕಾಂಗ್ ಆಹಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ. ಹಾಂಗ್ ಕಾಂಗ್ನಲ್ಲಿ ಭಾರತದ ಎವರೆಸ್ಟ್ ಮತ್ತು ಎಂಡಿಹೆಚ್ ಪ್ರಾಡೆಕ್ಟ್ಗಳನ್ನು ನಿಷೇಧ ಮಾಡಿದೆ.
UIDAI Recruitment: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿದೆ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 35,000 ಸಂಬಳ
“ಎಂಡಿಎಚ್ನ ಮೂರು ಹಾಗೂ ಎವರೆಸ್ಟ್ನ ಒಂದು ಉತ್ಪನ್ನದ ಸ್ಯಾಂಪಲ್ ಪಡೆದು ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಪೆಸ್ಟಿಸೈಡ್ ಎಥಿಲೀನ್ ಆಕ್ಸೈಡ್ ಪತ್ತೆಯಾಗಿದೆ. ಈ ಆಕ್ಸೈಡ್ ಮನುಷ್ಯನು ಸೇವಿಸಲು ಅಪಾಯಕಾರಿಯಾಗಿದೆ. ಕ್ಯಾನ್ಸರ್ ಕಾರಕ ಕಾರ್ಸಿನೋಜೆನಿಕ್ ರಾಸಾಯನಿಕವೂ ಪತ್ತೆಯಾಗಿದೆ. ಹಾಗಾಗಿ, ದೇಶದ ಮಾರಾಟಗಾರರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡದಂತೆ, ಮಳಿಗೆಗಳಲ್ಲಿ ಇರಿಸದಂತೆ ಸೂಚಿಸಲಾಗಿದೆ” ಎಂಬುದಾಗಿ ಹಾಂಕಾಂಗ್ನ ಸೆಂಟರ್ ಫಾರ್ ಫುಡ್ ಸೇಫ್ಟಿ ತಿಳಿಸಿದೆ. ಇವುಗಳನ್ನು ನಿಷೇಧಿಸಿ ಏಪ್ರಿಲ್ 5ರಂದೇ ಆದೇಶ ಹೊರಡಿಸಿದೆ.