ಬೆಂಗಳೂರು:- ಭಾರತದ ಮೊಟ್ಟ ಮೊದಲ ಡಬಲ್ ಡೆಕ್ಕರ್ ಪ್ಲೈ ಓವರ್ ರಸ್ತೆ ಕಳಪೆ ಆಗಿದ್ದು, ಎಲ್ಲೆಲ್ಲೂ ಇರುವ ಗುಂಡಿಗಳಿಂದ ಜನ ರೋಸಿ ಹೋಗಿದ್ದಾರೆ.
ಪ್ರಜಾ ಟಿವಿ ಗದಗ ಜಿಲ್ಲಾ ವರದಿಗಾರ ಶರಣು ದೊಡ್ಡೂರಗೆ ಗದಗ ಜಿಲ್ಲಾಡಳಿತದಿಂದ ಸನ್ಮಾನ
ಸ್ಥಳೀಯ ಶಾಸಕರು, ಸಚಿವರು ಆಗಿರುವ ರಾಮಲಿಂಗಾ ರೆಡ್ಡಿ ಅವರ ಪರಿಶ್ರಮದಿಂದ ಈ ಪ್ಲೈಓವರ್ ರೆಡಿಯಾಗಿದ್ದು, ಇದನ್ನು ರಾಮಲಿಂಗರೆಡ್ಡಿ ಮಾದರಿ ಎಂದೇ ಕರೆಯುತ್ತಿದ್ದಾರೆ. ಪ್ಲೈ ಓವರ್ ಓಪನ್ ಆಗಿ 5 ತಿಂಗಳಷ್ಟೇ ಆಗುತ್ತಿದೆ. ಮತ್ತೊಂದು ಮಾರ್ಗದ ಪ್ಲೈ ಓವರ್ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ. ಆದರೆ, ಈಗಾಗಲೇ ಈ ರಸ್ತೆಯಲ್ಲಿ ಎರಡು ಕಡೆ ಡಾಂಬರ್ ಕಿತ್ತು ಗುಂಡಿಗಳಾಗಿದ್ದು, ವಾಹನ ಸವಾರರಿಗೆ, ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಅಪಾಯಕರವಾಗಿ ಪರಿಣಮಿಸಿದೆ.
ಗುಂಡಿ ಬಗ್ಗೆ ವಾಹನ ಸವಾರರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವ ಮಟ್ಟಕ್ಕೆ ಅಪಾಯಕರವಾಗಿದೆ ಎಂಬುದನ್ನೂ ತಿಳಿಸಿದ್ದಾರೆ.
ಈಗಲೇ ರಸ್ತೆ ಗುಂಡಿಯನ್ನು ಸರಿ ಮಾಡದೇ ಹೋದರೆ ಮುಂದೆ ದೊಡ್ಡ ಗುಂಡಿಗಳಾಗಿ ಇಡೀ ರಸ್ತೆಯೇ ಗುಂಡಿಮಯವಾಗುವ ಸಾಧ್ಯತೆ ಇದೆ. ಡಬಲ್ ಡೆಕ್ಕರ್ ಪ್ಲೈಓವರ್ ರಸ್ತೆ ಮೇಲಿನ ಮೇಲಿನ ಗುಂಡಿ ಬಗ್ಗೆ ಸಚಿವ ರಾಮಲಿಂಗರೆಡ್ಡಿ ಮಾತಾನಾಡಿದ್ದು, ಕೂಡಲೇ ಗುಂಡಿಯನ್ನು ಮುಚ್ಚಿ ಸರಿಯಾದ ವ್ಯವಸ್ಥೆ ಮಾಡಿ ಎಂದು ಬಿಎಂಆರ್ಸಿಎಲ್ಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.