ಭಾರತ ತಂಡದ ಬೌಲಿಂಗ್ ದಾಳಿಗೆ ಐರ್ಲೆಂಡ್ ತಂಡ ನಲುಗಿದ್ದು, 16 ಓವರ್ ಗಳಲ್ಲಿ 96 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡಕ್ಕೆ ಸಾಧಾರಣ ಗುರಿ ನೀಡಿದೆ.
Cardamom: ಕಡಿಮೆ ಬಂಡವಾಳ, ಅಧಿಕ ಲಾಭ..! ಈ ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ!
ಇಲ್ಲಿನ ನಸೌ ಕೌಂಟಿ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎಂಟನೇ ಪಂದ್ಯದಲ್ಲಿ ಭಾರತ ಹಾಗೂ ಐರ್ಲೆಂಡ್ ತಂಡಗಳು ಸೆಣಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಐರ್ಲೆಂಡ್ ತಂಡ, 16 ಓವರ್ಗಳ ಅಂತ್ಯಕ್ಕೆ 10 ವಿಕೆಟ್ಗಳ ನಷ್ಟಕ್ಕೆ 96 ರನ್ಗಳನ್ನು ಕಲೆ ಹಾಕಿದೆ.