ಪ್ರೀತಿ ಮಾಡುವುದು ಹಲವಾರು ಭಾವನಾತ್ಮಕ ಮತ್ತು ಮಾನಸಿಕ ಅನುಕೂಲಗಳನ್ನು ಹೊಂದಿದೆ. ಇದರ ಜೊತೆಗೆ ಲೈಂಗಿಕತೆಯು ಜೀವನದ ಒಂದು ಪ್ರಮುಖ ಭಾಗವಾಗಿದೆ. ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಲು ಭಾರತದಲ್ಲಿ ಮಡಿವಂತಿಕೆ ಜಾಸ್ತಿ. ಆದರೆ, ಸಂತಾನೋತ್ಪತ್ತಿಗೆ ಅನಿವಾರ್ಯವಾದ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು.
ಕಾಂಡೋಮ್ ತಯಾರಿಕಾ ಕಂಪೆನಿಯೊಂದು ನಡೆಸಿದ ಜಾಗತಿಕ ಸರ್ವೆಯೊಂದರಲ್ಲಿ ಭಾರತೀಯರು ಬೆಡ್ರೂಮಿನಲ್ಲಿ ಬಹಳಷ್ಟು ಕ್ರಿಯಾಶೀಲರಾಗಿದ್ದಾರೆಂದು ಬಹಿರಂಗವಾಗಿದೆ.
Kolara: ಫೆಂಗಲ್ ಚೆಂಡಮಾರುತ ಎಫೆಕ್ಟ್: ವಾನರಗಳಿಗೆ ಆಹಾರ ವಿತರಿಸಿದ ಶ್ರೀನಿವಾಸ!
ಸಂಭೋಗಕ್ಕೂ ಮುನ್ನ ಸುಮಾರು 10 ನಿಮಿಷಗಳ ಕಾಲ ಫೋರ್ಪ್ಲೇ ಆಡುವ ಭಾರತೀಯರು ಕನಿಷ್ಠ 10 ನಿಮಿಷ ಸಂಭೋಗದಲ್ಲಿ ನಿರತರಾಗಿರುತ್ತಾರೆ.
ಶೇ.72ರಷ್ಟು ಭಾರತೀಯರು ಸೆಕ್ಸ್ ಜೀವನದಲ್ಲಿ ತೃಪ್ತಿ ಕಂಡುಕೊಂಡಿದ್ದು ವಿಶ್ವದಲ್ಲೇ ಇದು ಅತ್ಯಂತ ಹೆಚ್ಚು ಎಂದು ಸಮೀಕ್ಷೆ ವೇಳೆ ತಿಳಿದು ಬಂದಿದೆ. ಅಲ್ಲದೇ ಶೇ.79ರಷ್ಟು ಭಾರತೀಯ ಜೋಡಿಗಳು ವಾರದಲ್ಲೊಮ್ಮೆ ಸಂಗಾತಿಯೊಂದಿಗೆ ಸೆಕ್ಸ್ ಮಾಡುತ್ತಾರೆ.
ಸರ್ವೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಮನೆಯಲ್ಲಿ ಮಾತ್ರಾ ಸೆಕ್ಸ್ ಮಾಡಲು ಇಚ್ಛೆ ಪಡುತ್ತಾರೆ, ಹೆಚ್ಚಿನವರು ಗರ್ಭಧಾರಣೆ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರಂತೆ