ಬೆಂಗಳೂರು: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕ್ರಿಕೆಟ್ ಜಗತ್ತಿನ ಅತಿದೊಡ್ಡ ಚೋಕರ್ಸ್ ಎಂದು ಟೀಕೆಗೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಪ್ರಶಸ್ತಿಯ ಹೊಸ್ತಿಲಿಗೆ ಬಂದು ಎಡವಿತು. ಇನ್ನು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಒಲಿದಿದೆ. ಮಹೇಂದ್ರ ಸಿಂಗ್ ಧೋನಿ ಬಳಿಕ ಐಸಿಸಿ ಟ್ರೋಫಿ ಗೆದ್ದ ಮೊದಲ ನಾಯಕ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಇನ್ನೂ ಹೌದು, ಟಿ20 ವಿಶ್ವಕಪ್ 2024 ಗೆದ್ದು ಬೀಗುವ ತಂಡಕ್ಕೆ ಒಂದಲ್ಲ & ಎರಡಲ್ಲ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಹಣ ಸಿಗಲಿದೆ. ಹಾಗೇ ಫೈನಲ್ಗೆ ಬಂದು ಸೋಲುವ ತಂಡಕ್ಕೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಗಲಿದೆ. ಈ ಮೂಲಕ ಟಿ20 ವಿಶ್ವಕಪ್ 2024 ಗೆಲ್ಲುವ ತಂಡಕ್ಕೆ ಹತ್ತಾರು ಕೋಟಿ ರೂಪಾಯಿ ಹಣ ಸಿಗಲಿದೆ. ಇದು ಕೇವಲ ಆ ತಂಡಕ್ಕೆ ಸಿಗುವ ಹಣವಾಗಿದ್ದರೆ, ಮ್ಯಾನ್ ಆಫ್ ದಿ ಸೀರಿಸ್, ಅತಿಹೆಚ್ಚು ವಿಕೆಟ್ ತೆಗೆದ ಬಹುಮಾನ, ಅತಿಹೆಚ್ಚು ರನ್ ಗಳಿಸಿದ ಬಹುಮಾನ ಪ್ರತ್ಯೇಕವಾಗಿ ಸಿಗಲಿದೆ.
![Demo](https://ainlivenews.com/wp-content/uploads/2023/12/spoorthi-1.jpg)
https://ainlivenews.com/kannada-compulsory-in-all-private-schools-including-icse-cbse-state-govt/
ಅದೇ ರೀತಿ ಟಿ20 ವಿಶ್ವಕಪ್ ಗೆದ್ದು ಬೀಗಿದ ಭಾರತ ತಂಡಕ್ಕೆ ಭರ್ಜರಿ 20 ಕೋಟಿ 42 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದೆ. ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾಗೆ 10 ಕೋಟಿ 68 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಟಿ20 ವಿಶ್ವಕಪ್ ಘೋಷಣೆ ಮಾಡಿದಾಗ ಐಸಿಸಿ ಒಟ್ಟು 11.25 ಮಿಲಿಯನ್ ಅಮೆರಿಕನ್ ಡಾಲರ್ ಘೋಷಣೆ ಮಾಡಿತ್ತು. ಭಾರತೀಯ ಕರೆನ್ಸಿಯಲ್ಲಿ ಅದರ ಮೌಲ್ಯ ಸುಮಾರು ರೂ 93.5 ಕೋಟಿಗೆ ಸಮನಾಗಿದೆ.
2022ರಲ್ಲಿ ನಡೆದ ವಿಶ್ವಕಪ್ಗೆ ಹೋಲಿಸಿದರೆ ಬಹುಮಾನದ ಮೊತ್ತ ದುಪ್ಪಟ್ಟಾಗಿದೆ. ಏಕೆಂದರೆ ಎರಡು ವರ್ಷಗಳ ಹಿಂದೆ ವಿಶ್ವಕಪ್ನ ಬಹುಮಾನದ ಒಟ್ಟು ಮತ್ತು 46.6 ಕೋಟಿ ರೂಪಾಯಿ ಆಗಿತ್ತು. ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ 13.3 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಸೆಮಿ ಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ 6.5 ಕೋಟಿ ರೂಪಾಯಿ ಸಿಕ್ಕಿದೆ. ಸೆಮಿಫೈನಲ್ ತಂಡಗಳಲ್ಲದೇ ಸೂಪರ್-8 ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ 4 ತಂಡಗಳಿಗೂ ಸಾಕಷ್ಟು ಹಣವನ್ನು ನಿಗದಿಪಡಿಸಲಾಗಿದೆ. ಸೂಪರ್-8ರಲ್ಲಿ ಆಡಿದ ಪ್ರತಿ ತಂಡಕ್ಕೆ ಅಂದಾಜು 3.19 ಕೋಟಿ ರೂ. ಬಹುಮಾನ ಸಿಗಲಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)