ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 251 ರನ್ ಕಲೆಹಾಕಿದರೆ, ಭಾರತ ತಂಡ ಈ ಗುರಿಯನ್ನು ಕೇವಲ 49 ಓವರ್ಗಳಲ್ಲಿ ಚೇಸ್ ಮಾಡಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾಗ ಬೌಲರ್ ಮೊಹಮ್ಮದ್ ಶಮಿ ಅವರ ತಾಯಿ ಕಾಲು ಮುಟ್ಟಿ ಆಶೀರ್ವಾದ ಪಡೆದು ಕೊಹ್ಲಿ ಗಮನ ಸೆಳೆದಿದ್ದಾರೆ.
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು.? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ.?
ಭಾರತದ ಐತಿಹಾಸಿಕ ಗೆಲುವಿನ ಸಂಭ್ರಮದ ನಡುವೆ, ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅವರ ತಾಯಿ ಅಂಜುಮ್ ಅರಾ ನಡುವಿನ ಹೃದಯಸ್ಪರ್ಶಿ ಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲಿನ ಗಾಯದಿಂದಾಗಿ ಒಂದು ವರ್ಷದ ವಿರಾಮದ ನಂತರ ತಮ್ಮ ಮಗ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದನ್ನು ವೀಕ್ಷಿಸಲು ದುಬೈಗೆ ಬಂದಿದ್ದರು.
ಪಂದ್ಯದ ನಂತರ ಕೊಹ್ಲಿ, ಶಮಿ ಅವರ ತಾಯಿಯನ್ನು ಭೇಟಿಯಾದರು. ಕೊಹ್ಲಿ ಭಾವುಕರಾಗಿ ಶಮಿ ಅವರ ತಾಯಿಯ ಬಳಿಗೆ ಬಂದು ಗೌರವದ ಸಂಕೇತವಾಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಶಮಿ ತಾಯಿ ಕೂಡ ಕೊಹ್ಲಿ ತಲೆ ಮುಟ್ಟಿ ಆಶೀರ್ವದಿಸಿದರು. ಈ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಜನಮೆಚ್ಚುಗೆ ಗಳಿಸಿದೆ.
ಆಟಗಾರರ ನಡುವಿನ ಬಲವಾದ ಸೌಹಾರ್ದತೆ ಮತ್ತು ಗೌರವವನ್ನು ಇದು ಎತ್ತಿ ತೋರಿಸಿದೆ. ನಂತರ ವಿರಾಟ್ ಮತ್ತು ಶಮಿ ಅವರ ತಾಯಿ ಜೊತೆ ಫೋಟೊ ತೆಗೆಸಿಕೊಂಡರು. ಪರಸ್ಪರರು ಕುಶಲೋಪರಿ ವಿಚಾರಿಸಿದರು.