ವಾಶಿಂಗ್ಟನ್: ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಒಂಬತ್ತನೆ ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಮೂಲಕ ಅಧಿಕಾರ ಸ್ವೀಕರಿಸಿದರು.
ಕಾಶ್ ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಹಾಗೂ ಕುಟುಂಬದ ಸದಸ್ಯರು ಅವರ ಪಕ್ಕದಲ್ಲೇ ನಿಂತಿದ್ದರು. ಉಳಿದ ಕುಟುಂಬದ ಸದಸ್ಯರು ಅವರ ಮುಂದಿನ ಆಸನಗಳಲ್ಲಿ ಆಸೀನರಾಗಿದ್ದರು.
ಕ್ರಿಸ್ಟೋಫರ್ ರೇಯ ಉತ್ತರಾಧಿಕಾರಿಯನ್ನಾಗಿ ಕಾಶ್ ಪಟೇಲ್ ರನ್ನು ಅಮೆರಿಕ ಸೆನೆಟ್ ಆಯ್ಕೆ ಮಾಡಿದ ನಂತರ, ಐಸೆನ್ ಹೋವರ್ ಎಕ್ಸಿಕ್ಯೂಟಿವ್ ಕಚೇರಿಯ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಮೆರಿಕ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರಿಂದ ಕಾಶ್ ಪಟೇಲ್ ಎಫ್ಬಿಐನ ಒಂಬತ್ತನೆ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ಸ್ವೀಕರಿಸಿದ ನಂತರ ಮಾತನಾಡಿದ ಕಾಶ್ ಪಟೇಲ್, ಅಮೆರಿಕನ್ನರ ಕನಸಿನಲ್ಲಿ ಜೀವಿಸುತ್ತಿದ್ದೇನೆ. ಮೊದಲನೆ ತಲೆಮಾರಿನ ಭಾರತೀಯ ಭೂಮಿ ಮೇಲಿನ ಅದ್ಭುತ ರಾಷ್ಟ್ರದ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲು ಸಜ್ಜಾಗಿದ್ದಾನೆ” ಎಂದು ಹೇಳಿದರು.