ಪಾಕ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಪಾಕ್ ಅಭಿಮಾನಿಗಳು ಗೆದ್ದು ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಕ್ರಿಕೆಟ್ ಲವರ್ಸ್ ಗೆ ಗುಡ್ ನ್ಯೂಸ್ ಕೊಟ್ಟ BMTC.. ಏನದು ಗೊತ್ತಾ!?
ಭಾನುವಾರ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 119 ರನ್ಗಳಿಸಿ ಆಲೌಟ್ ಆಗಿತ್ತು.
120 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಭಾರತೀಯ ಬೌಲರ್ಗಳ ಮಿಂಚಿನ ದಾಳಿಗೆ ದಂಗಾಗಿ ನಿಂತರು. ಪರಿಣಾಮ 20 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 113 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತ್ತು
ಗೆಲುವಿನ ಬಳಿಕ ಪಾಕಿಸ್ತಾನ್ ತಂಡದ ಅಭಿಮಾನಿಗಳು ಭಾರತದ ಪರ ಘೋಷಣೆ ಕೂಗಿದ್ದು ವಿಶೇಷ. ಪಂದ್ಯದ ಮುಗಿದ ಬಳಿಕ ನ್ಯೂಯಾರ್ಕ್ನ ಸ್ಟೇಡಿಯಂನ ಹೊರಗೆ ಭಾರತೀಯ ಅಭಿಮಾನಿಗಳೊಂದಿಗೆ ಪಾಕಿಸ್ತಾನಿಯೊಬ್ಬರು ಕುಣಿಯುತ್ತಿದ್ದರು.
ಇದೇ ವೇಳೆ ನೀವು ಡ್ಯಾನ್ಸ್ ಮಾಡಲು ಕಾರಣವೇನು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಾಕಿಸ್ತಾನ್ ತಂಡದ ಅಭಿಮಾನಿ, ಡ್ಯಾನ್ಸ್ ಮಾಡಲು ಒಂದು ಕಾರಣ ಬೇಕಷ್ಟೇ. ದಿನದ ಅಂತ್ಯದಲ್ಲಿ ನಾವೆಲ್ಲರೂ ಭಾರತೀಯರು… ಅಖಂಡ ಭಾರತ… ಜೈ ಹಿಂದ್ ಎಂದಿದ್ದಾರೆ.
ಪಾಕಿಸ್ತಾನ್ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಅಭಿಮಾನಿ ಕೂಡ ಭಾರತಕ್ಕೆ ಜೈಕಾರ ಹಾಕುತ್ತಾ ಸಾಗುತ್ತಿರುವುದು ಕಂಡು ಬಂದಿದೆ