ಟೀಮ್ ಇಂಡಿಯಾ ಗೆದ್ದರೂ ರಿಯಾನ್ ಪರಾಗ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಪಂದ್ಯವು ಸೂಪರ್ ಓವರ್ನತ್ತ ಸಾಗಿತು.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ರಿಯಾನ್ ಪರಾಗ್, ನನ್ನ ಪ್ರದರ್ಶನದ ಬಗ್ಗೆ ನಿಜವಾಗಿಯೂ ನಿರಾಶೆಗೊಂಡಿದ್ದೇನೆ. ಏಕೆಂದರೆ ಬ್ಯಾಟಿಂಗ್ ವೇಳೆ ನಾನು ಕೊನೆಯವರೆಗೂ ಬ್ಯಾಟಿಂಗ್ ಮಾಡಬೇಕಾಗಿತ್ತು. ಬಹುಶಃ ನಾನು ಔಟಾಗದಿದ್ದರೆ ಭಾರತ ತಂಡವು 160 ಗಳಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಇದಾಗ್ಯೂ ಕಡಿಮೆ ಮೊತ್ತಗಳಿಸಿದರೂ ನಾನು ಉತ್ತಮ ಬೌಲಿಂಗ್ ಮಾಡಿದ್ದೆವು. ಬೌಲಿಂಗ್ನಲ್ಲಿ ನನ್ನ ಪ್ರದರ್ಶನ ಖುಷಿ ನೀಡಿದೆ. ನಾನು ನನ್ನ ಪ್ಲ್ಯಾನ್ಗಳನ್ನು ತುಂಬಾ ಸರಳವಾಗಿ ಇರಿಸಲು ಬಯಸುತ್ತೇನೆ. ಹೀಗಾಗಿಯೇ ನಾನು ಲೆಗ್-ಬ್ರೇಕ್ನಲ್ಲಿ ಕೆಲಸ ಮಾಡುತ್ತಿದ್ದೇನೆ.
ದೇಶೀಯ ಕ್ರಿಕೆಟ್ನಲ್ಲಿ ಲೆಗ್ ಬ್ರೇಕ್ ಎಸೆತಗಳನ್ನು ಪ್ರಯತ್ನಿಸಿದ್ದೆ. ಕೆಲವು ನೆಟ್ ಸೆಷನ್ಗಳನ್ನು ಅಭ್ಯಾಸ ಮಾಡಿದ್ದೇನೆ. ಇದೀಗ ನನ್ನ ಬೌಲಿಂಗ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನಾಯಕ ಸೂರ್ಯಕುಮಾರ್ ಯಾದವ್ ಕೂಡ ಲೆಗ್ ಬ್ರೇಕ್ ಎಸೆಯುವಂತೆ ಸೂಚಿಸಿದ್ದರು. ಇದು ಸಹ ನನಗೆ ಖುಷಿ ನೀಡಿತು ಎಂದು ರಿಯಾನ್ ಪರಾಗ್ ಹೇಳಿದ್ದಾರೆ.