ಬೆಂಗಳೂರು: ಇಲ್ಲಿಯವರೆಗೆ ಮೋದಿಗೆ (Narendra Modi) ಮ್ಯಾಚ್ ಆಗುವ ನಾಯಕತ್ವ ಸಿಕ್ಕಿರಲಿಲ್ಲ. ಈಗ ಖರ್ಗೆಯವರು (Mallikarjun Kharge) ಮೋದಿಗೆ ಮ್ಯಾಚ್ ಆಗುವಂತಹ ನಾಯಕ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಂಡಿಯಾ (INDIA) ಒಕ್ಕೂಟ ಸದಸ್ಯರು ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ (Prime Minister Candidate) ಪ್ರಸ್ತಾಪ ಮಾಡಿರುವುದು ಒಳ್ಳೆಯ ಬೆಳವಣಿಗೆ. ಮೋದಿ ವರ್ಸಸ್ ಖರ್ಗೆ ಎಂಬುದು ಖಂಡಿತ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಲಿತ ನಾಯಕ ಎನ್ನುವುದು ಮಾತ್ರವಲ್ಲ. ಖರ್ಗೆ ಅನುಭವದ ಆಧಾರದ ಮೇಲೆ ಅವರ ಹೆಸರು ಮುನ್ನೆಲೆಗೆ ಬಂದಿದೆ. ದಲಿತ ನಾಯಕ ಎಂಬ ಲಾಭ ನಷ್ಟ ಸೆಕೆಂಡರಿ. ಮಲ್ಲಿಕಾರ್ಜುನ ಖರ್ಗೆ ಒಬ್ಬ ಒಳ್ಳೆಯ ಸಂಸದೀಯ ಪಟು ಎಂದರು.
ವಿರೋಧ ಪಕ್ಷದ ನಾಯಕರು, ರಾಜ್ಯ ಅಧ್ಯಕ್ಷರು ಆಗಿ ಅನುಭವ ಇದೆ. ರಾಷ್ಟ್ರೀಯ ಅಧ್ಯಕ್ಷರು ಅವರೊಬ್ಬ ಪ್ರಬುದ್ದ ರಾಜಕಾರಣಿ. ಇಂಡಿಯಾ ಒಕ್ಕೂಟ ತಂಡದಲ್ಲಿರುವ ಅತ್ಯಂತ ಹಿರಿಯ ನಾಯಕರಾಗಿದ್ದಾರೆ ಎಂದು ಹೇಳಿದರು.