ವಾಷಿಂಗ್ಟನ್: ಭಾರತವು ಅಮೆರಿಕದ ಜೊತೆ ಪಾಲುದಾರರಾಗಲು ಬಯಸಿದೆ. ಆದರೆ ಸದ್ಯಕ್ಕೆ ಅವರು ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಾರೆ ಎಂಬುದನ್ನು ನಂಬುವುದಿಲ್ಲ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ನವದೆಹಲಿಯು ಚುರುಕಾಗಿ ವರ್ತಿಸುತ್ತಿದೆ ಮತ್ತು ರಷ್ಯಾದೊಂದಿಗೆ ನಿಕಟವಾಗಿದೆ ಎಂದು ಭಾರತೀಯ-ಅಮೆರಿಕನ್ ಮೂಲದ ಹ್ಯಾಲೆ ಹೇಳಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಹ್ಯಾಲೆ, ಪ್ರಸ್ತುತ ಭಾರತವು ಯುನೈಟೆಡ್ ಸ್ಟೇಟ್ಸ ಅನ್ನು ದುರ್ಬಲವಾಗಿ ನೋಡುತ್ತಿದೆ. “ನಾನು ಭಾರತದ ಜತೆ ಕೂಡ ವ್ಯವಹರಿಸಿದ್ದೇನೆ. ನಾನು ಮೋದಿ ಜತೆ ಮಾತನಾಡಿದ್ದೇನೆ. ಭಾರತವು ನಮ್ಮ ಜತೆ ಪಾಲುದಾರನಾಗಲು ಬಯಸಿದೆ. ಅವರು ರಷ್ಯಾ ಜತೆ ಪಾಲುದಾರಕೆ ಹೊಂದಲು ಬಯಸಿಲ್ಲ. ಆದರೆ ಸಮಸ್ಯೆ ಏನೆಂದರೆ ಗೆಲ್ಲಲು ಭಾರತ ನಮ್ಮನ್ನು ನಂಬುವುದಿಲ್ಲ. ನಮ್ಮ ನಾಯಕತ್ವದಲ್ಲಿ ಅವರಿಗೆ ವಿಶ್ವಾಸ ಇಲ್ಲ. ಅವರು ಈಗ ನಮ್ಮನ್ನು ದುರ್ಲಬರು ಎಂಬಂತೆ ನೋಡುತ್ತಿದ್ದಾರೆ. ಭಾರತ ಯಾವಾಗಲೂ ಜಾಣ್ಮೆಯಿಂದ ಆಟವಾಡುತ್ತಿದೆ. ಈ ಚತುರ ಆಟದೊಂದಿಗೆ ರಷ್ಯಾ ಜತೆ ಆಪ್ತವಾಗಿ ಉಳಿದುಕೊಂಡಿದೆ. ಈ ಕಾರಣದಿಂದಾಗಿ ಅವರು ತಮ್ಮ ಸಾಕಷ್ಟು ಸೇನಾ ಸಾಧನಗಳನ್ನು ಪಡೆದುಕೊಂಡಿದ್ದಾರೆ” ಎಂದು ನಿಕ್ಕಿ ಹ್ಯಾಲೆ ಹೇಳಿದ್ದಾರೆ.
“ನಾವು ಮತ್ತೆ ನಾಯಕತ್ವ ಪಡೆದಾಗ, ನಾವು ನಮ್ಮ ದೌರ್ಬಲ್ಯವನ್ನು ಹೊರಹಾಕಲು ಆರಂಭಿಸಿದಾಗ ಮತ್ತು ಅನಗತ್ಯ ವಿಷಯಗಳಲ್ಲಿ ಮೂಗು ತೋರಿಸುವುದನ್ನು ನಿಲ್ಲಿಸಿದಾಗ, ನಮ್ಮ ಸ್ನೇಹಿತರಾದ ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಎಲ್ಲರೂ.. ಜತೆಗೆ ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ- ಎಲ್ಲರೂ ಅದನ್ನು ಮಾಡಲು ಬಯಸುತ್ತಾರೆ” ಎಂದು ರಿಪಬ್ಲಿಕನ್ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಮಿತ್ರ ದೇಶಗಳ ಜತೆಗಿನ ಸಂಬಂಧ ಸುಧಾರಿಸುತ್ತದೆ ಎಂದಿದ್ದಾರೆ.