ಅಹಮಾದಾಬಾದ್: 200 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುವ ಗುರಿಯನ್ನು ನಾವು ತಲುಪಿದ್ದೇವೆ. 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಯೋಜಿಸಿರುವ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
200 ಅಧಿಕ ವಿದೇಶಿ ಪ್ರತಿನಿಧಿಗಳು, ವಿವಿಧ ಕಂಪನಿಗಳು ಹಾಗೂ 10,000 ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 40 ಸೆಷನ್ ಗಳು ನಡೆಯುತ್ತಿದ್ದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದಲ್ಲಿರುವ ಅವಕಾಶಗಳುತ್ತು ಹೂಡಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.
Headache: ಪದೇ ಪದೇ ತಲೆನೋವು ಕಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ ತಲೆನೋವು ಮಂಗಮಾಯವಾಗುತ್ತೆ!
ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮುಂದಿನ ಮೂರು ದಿನ ಇಂಧನದ ಭವಿಷ್ಯ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ವಲಯದ ತಜ್ಞರಿದ್ದಾರೆ ಇದರಿಂದ ನಮಗೆ ಮಾರ್ಗದರ್ಶನ ಸಿಗಲಿದೆ ಒಬ್ಬರಿಂದ ಮತ್ತೊಬ್ಬರು ಈ ಎಕ್ಸ್ಪೋದಿಂದ ಹೊಸತನ್ನು ಕಲಿಯಲಿದ್ದೇವೆ ಎಂದರು.
ಭಾರತದಲ್ಲಿ ಕಲ್ಲಿದ್ದಲು ಗ್ಯಾಸ್ ನಿಕ್ಷೇಪ ಹೆಚ್ಚಿನ ಪ್ರಮಾಣ ಇಲ್ಲ. ಹೀಗಾಗಿ ಸೋಲಾರ್ ಮತ್ತು ನ್ಯೂಕ್ಲಿಯರ್ ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ ಹೊಂದಿದೆ. ಸೂರ್ಯಘರ್ ಯೋಜನೆ ಅಧ್ಯಯನ ಮಾಡಬೇಕು, ಮನೆ ಛಾವಣಿ ಮೇಲೆ ಸೋಲಾರ್ ಅಳವಡಿಸಲು ಸಬ್ಸಿಡಿ ನೀಡುವುದಲ್ಲದೇ ಸರ್ಕಾರ ಸಹಾಯ ಮಾಡುತ್ತಿದೆ, 1.30 ಕೋಟಿ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 3.5 ಲಕ್ಷ ಮನೆಗಳಲ್ಲಿ ಸೋಲಾರ್ ಅಳವಡಿಕೆಯಾಗಿದೆ. ಈಗ ಜನರು ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಣ ಮದ ಸಂಪಾದನೆಯಾಗಲಿದೆ ಎಂದರು.
ಇಲ್ಲಿ ವಿದ್ಯುತ್ ಉತ್ಪಾದನೆ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಪ್ರಕೃತಿಯ ರಕ್ಷಣೆಯೂಯಾಗಲಿದೆ. ಮೂಡೇರಾ ದೇಶದ ಮೊದಲ ಗ್ರಾಮವಾಗಿದೆ, ಇಲ್ಲ ಎಲ್ಲ ಮನೆಗಳಿಗೆ ಸೋಲಾರ್ ಅಳವಡಿಸಿದೆ ಸೋಲಾರ್ ಮೂಲಕ ಈ ಹಳ್ಳಿ ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಿದೆ. ಅಯೋಧ್ಯೆಯನ್ನು ಮಾಡೆಲ್ ಸೋಲಾರ್ ಸಿಟಿ ಮಾಡುವ ಚಿಂತನೆ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದೆ. ಬೀದಿ ದೀಪ, ಬೋರ್ಡ್, ಎಟಿಎಂ ಸೇರಿ ಹಲವು ಕಡೆ ಸೋಲಾರ್ ಬಳಸಲಾಗುತ್ತಿದೆ. ಭಾರತದಲ್ಲಿ 17 ಸೋಲಾರ್ ಸಿಟಿ ನಿರ್ಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.