ಭಾರತ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಗತಿ ಕಾಣುತ್ತಿದೆ. ಭಾರತವನ್ನು ವಿದೇಶಿಗರು ಅಚ್ಚರಿಯ ರೀತಿಯಲ್ಲಿ ನೋಡುವಂತಾಗಿದೆ. ಇದೇ ಕಾರಣಕ್ಕೆ ಇಂದು ಪ್ರತಿಯೊಂದು ದೇಶಗಳು ಕೂಡ ಭಾರತದ ಹಿಂದೆ ಬಿದ್ದಿವೆ. ಇದೀಗ ವರದಿಯೊಂದರಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದ್ದು ಮುಂದಿನ ಆರು ವರ್ಷಗಳಲ್ಲಿ ಅಂದರೆ 2030ರಲ್ಲಿ ಭಾರತ ಚೀನಾ ಹಾಗೂ ಅಮೆರಿಕವನ್ನೇ ಮೀರಿಸಲಿದೆ ಎಂದು ವರದಿಯಾಗಿದೆ.
ಪ್ರಸ್ತುತ ಭಾರತ 3,600 ಬಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು 2047 ರ ವೇಳೆಗೆ 30 ಸಾವಿರ ಶತಕೋಟಿ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸಿಕೊಂಡಿದೆ. ಹಾಗೆಯೇ ಆರ್ಥಿಕತೆಯ ವಿಷಯಕ್ಕೆ ಬಂದರೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ.
ಇನ್ನು ಆರ್ಥಿಕತೆ ವಿಷಯದಲ್ಲಿ ಭಾರತವು ಮುಂದಿನ ಮೂರು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಮತ್ತು 2030 ರ ವೇಳೆಗೆ ಜಾಗತಿಕವಾಗಿ ಮೂರನೇ ಅತಿದೊಡ್ಡ ದೇಶವಾಗಲು ಬಾರತವು ಸಿದ್ಧವಾಗಿದೆ. 2024 ರಲ್ಲಿ ಹೂಡಿಕೆ ಬ್ಯಾಂಕಿಂಗ್ ಕಂಪನಿ JP ಮೋರ್ಗಾನ್ ಅವರ ಸರ್ಕಾರಿ ಮಾರುಕಟ್ಟೆಗಳ ಬಾಂಡ್ ಇಂಡೆಕ್ಸ್’ಗೆ ಭಾರತದ ಪ್ರವೇಶವು, ಹೆಚ್ಚುವರಿ ಸರ್ಕಾರಿ ಹಣಕಾಸು ಮತ್ತು ದೇಶೀಯ ಬಂಡವಾಳ ಮಾರುಕಟ್ಟೆಗಳಲ್ಲಿ ಗಮನಾರ್ಹ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುತ್ತದೆ.
ಮುಂದಿನ ದಶಕದಲ್ಲಿ ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಭಾರತದ ಹಲವು ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಎಸ್ & ಪಿ ವರದಿ ಹೇಳಿದೆ. ಇನ್ನು ಡಿಫೈನಿಂಗ್ ದಶಕ ವರದಿಯಲ್ಲಿ, 2035 ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸರಾಸರಿ ಬೆಳವಣಿಗೆ ದರವು 4.06 ಪ್ರತಿಶತದಷ್ಟಿದ್ದರೆ, ಮುಂದುವರಿದ ಆರ್ಥಿಕತೆಗಳಿಗೆ ಈ ದರವು 1.59 ಪ್ರತಿಶತದಷ್ಟಿರುತ್ತದೆ ಎಂದು ಹೇಳಲಾಗುತ್ತಿದೆ,
2035 ರ ವೇಳೆಗೆ ಭಾರತ ಮಾರುಕಟ್ಟೆಗಳು ಜಾಗತಿಕ ಆರ್ಥಿಕ ಬೆಳವಣಿಗೆಗೆ ಸುಮಾರು 65 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ. ಈ ಬೆಳವಣಿಗೆಯು ಮುಖ್ಯವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶದ ಉದಯೋನ್ಮುಖ ಆರ್ಥಿಕತೆಗಳಿಂದ ಕೊಡುಗೆ ನೀಡಲಿದೆ. ಇವುಗಳಲ್ಲಿ ಚೀನಾ, ಭಾರತ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಸೇರಿವೆ. ಹೆಚ್ಚುವರಿಯಾಗಿ, 2035 ರ ವೇಳೆಗೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಸ್ಥಾಪಿಸಲ್ಪಡುತ್ತದೆ, ಆದರೆ ಇಂಡೋನೇಷ್ಯಾ ಮತ್ತು ಬ್ರೆಜಿಲ್ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನವನ್ನು ಪಡೆದುಕೊಳ್ಳುತ್ತವೆ ಎಂದು ಎಸ್ & ಪಿ ಹೇಳಿದೆ.